ಭೋಪಾಲ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ 30 ಹರೆಯದ ಮಹಿಳೆಯೊಬ್ಬಳು ತನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಮೈದುನನಿಗೆ ತಕ್ಕ ಪಾಠ ಕಲಿಸಿದ್ದಾಳೆ.
ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದ ಗಂಡನ ತಮ್ಮ 22ರ ಹರೆಯದ ಸಂಜು ಕೌಲ್ ಎಂಬಾತನ ಮರ್ಮಾಂಗಕ್ಕೇ ಮಹಿಳೆ ಕತ್ತರಿ ಹಾಕಿದ್ದಾಳೆ.
ಇಷ್ಟೇ ಅಲ್ಲ ಮೈದುನನ ಕತ್ತರಿಸಿದ ಮರ್ಮಾಂಗವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದ ಮಹಿಳೆ ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ
ಅತ್ತಿಗೆಯ ಕೈಯಿಂದ ಸಿಕ್ಕಿದ ಶಿಕ್ಷೆಯಿಂದ ಅವಮಾನಿತನಾದ ಸಂಜು ಆತ್ಮಹತ್ಯೆಗೂ ಯತ್ನಿಸಿದ್ದ .ಈ ಘಟನೆಯ ಬಗ್ಗೆ ಅತ್ತೆ ಮಾವನಿಗೆ ಗೊತ್ತಿಲ್ಲ. ಯಾಕೆಂದರೆ ಘಟನೆ ನಡೆದದ್ದು ಮುಂಜಾನೆ ಮತ್ತು ಸಂಜು ನೋವು ಸಹಿಸಿಕೊಂಡರೂ ಬೊಬ್ಬೆ ಹಾಕಿಲ್ಲ ಎಂದು ಚೌರ್‌ಹಟ್‌ನ ಪೊಲೀಸ್ ಇನ್ಸ್‌ಪೆಕ್ಟಪ್ ಆರ್ತಿ ಚೌರಾಟೆ ಹೇಳಿದ್ದಾರೆ.
ಮಹಿಳೆಯ ಗಂಡ ನಾಶಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಅತ್ತೆ ಮತ್ತು ಮಾವನ ಜತೆ ವಾಸಿಸುತ್ತಿರುವ ಈ ಮಹಿಳೆಗೆ ಸಂಜು ಲೈಂಗಿಕ ಕಿರುಕುಳ ನೀಡುತ್ತಿದ್ದನು. ಮಾತ್ರವಲ್ಲದೆ ತನ್ನೊಂದಿಗೆ ಲೈಂಗಿಕ ಸಂಬಂಧ ನಡೆಸುವಂತೆ ಒತ್ತಾಯಿಸುತ್ತಿದ್ದನು. ಇದರಿಂದ ರೋಸಿ ಹೋದ ಮಹಿಳೆ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ವಿರುದ್ಧ ಸೆಕ್ಷನ್ 307ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.