ಕರ್ನಾಟಕ

ಹಿರಿಯ ನಟಿ ಲೀಲಾವತಿ ಅಸ್ವಸ್ಥ; ಐಸಿಯುನಲ್ಲಿ ಚಿಕಿತ್ಸೆ

Pinterest LinkedIn Tumblr

leelavathi

ಬೆಂಗಳೂರು: ಹಿರಿಯ ನಟಿ ಲೀಲಾವತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಮಾತ್ರೆ ಸೇವಿಸಿದ ವೇಳೆ ಲೀಲಾವತಿಯವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಈಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಗಿದ್ದೇನು?: ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಪುತ್ರ ವಿನೋದ್ ರಾಜ್ ಜೊತೆ ನೆಲೆಸಿದ್ದು ಎರಡು ದಿನಗಳ ಹಿಂದೆ ನಾಯಿ ಎಳೆದಾಗ ಲೀಲಾವತಿ ಆಯತಪ್ಪಿ ಕೆಳಗಡೆ ಬಿದ್ದಿದ್ದರು. ಈ ನೋವು ಕಡಿಮೆಯಾಗಲು ಮನೆಯಲ್ಲೇ ಲೀಲಾವತಿಯವರು ಮಾತ್ರೆಯನ್ನು ಸೇವಿಸುತ್ತಿದ್ದರು. ಆದರೆ ಈ ಮಾತ್ರೆ ಸೇವನೆಯಿಂದ ಇಂದು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಇಂದು ಸಂಜೆಯವರೆಗೆ ಐಸಿಯುನಲ್ಲೇ ಇರಬೇಕು ಎಂದು ಸೂಚಿಸಿದ್ದಾರೆ. ತಾಯಿ ಆರೋಗ್ಯವಾಗಿದ್ದಾರೆ ಎಂದು ನಟ ವಿನೋದ್ ರಾಜ್ ಹೇಳಿದ್ದಾರೆ.

Write A Comment