ಮಂಗಳೂರು,ಫೆ.10: ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 32 ವರ್ಷಗಳ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಅಶೋಕ್ ಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಂ.ವೆಂಕಟ್ರಾಯ ಪ್ರಭು ಅವರು ಅಶೋಕ್ ಕುಮಾರ್ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿ, ಶುಭ ಹಾರೈಸಿದರು. ಕಾಲೇಜಿನ ಅಸೋಸಿಯೇಟ್ ಡೀನ್ ಗಳಾದ ಡಾ.ಎಂ.ಚಕ್ರಪಾಣಿ, ಡಾ.ಆನಂದ್‌ಆರ್. ಅವರು ಶುಭಾ ಶಂಸನೆಗೈದರು.
ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕಚೇರಿಯ ಪ್ರಭಾರ ಮ್ಯಾನೇಜರ್ ಧರ್ಮೆಂದ್ರ ಎಂ.ಪಿ., ಹಣಕಾಸು ವಿಭಾಗ ಮುಖ್ಯಸ್ಥೆ ಮಧುಮತಿ ಎಚ್.ಎಸ್., ಹಾಸ್ಟೆಲ್ ಹಣಕಾಸು ವಿಭಾಗ ಮುಖ್ಯಸ್ಥೆ ಹೇಮಾವತಿ ಭಂಡಾರಿ, ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಸುಕನ್ಯಾಕುಮಾರಿ, ಎಚ್.ಆರ್.ವಿಭಾಗದ ಕಾರ್ಯನಿರ್ವಹಣಾಧಿಕಾರಿ ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್, ಡೀನ್ ಕಚೇರಿಯ ಕಿರಿಯ ಕಾರ್ಯ ನಿರ್ವಹಣಾಧಿಕಾರಿ ಭಾನುಕಲಾ ಉದಯ್, ಕಂಪ್ಯೂಟರ್ ವಿಭಾಗದ ಕಿರಿಯ ಕಾರ್ಯ ನಿರ್ವಹಣಾಧಿಕಾರಿ ಆರ್ವಿನ್ ಮಿರಾಂದ ಹಾಗೂ ಖರೀದಿ ವಿಭಾಗದ ಕಿರಿಯ ಕಾರ್ಯ ನಿರ್ವಹಣಾಧಿಕಾರಿ ಯಶವಂತ ಕುಮಾರ್ ಉಪಸ್ಥಿತರಿದ್ದರು.