ರಾಷ್ಟ್ರೀಯ

ಕೋಮಾದಲ್ಲಿ ಕನ್ನಡಿಗ ಯೋಧ ಕೊಪ್ಪದ್, ಸ್ಥಿತಿ ಇನ್ನೂ ಗಂಭೀರ: ಆಸ್ಪತ್ರೆ ವೈದ್ಯರು

Pinterest LinkedIn Tumblr

Hanumanta-10

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ 6 ದಿನಗಳ ನಂತರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ನಿವಾಸಿ, ಕನ್ನಡಿಗ ಯೋಧ ಹನುಮಂತಪ್ಪ ಕೊಪ್ಪದ್ ಅವರು ಕೋಮಾಕ್ಕೆ ಜಾರಿದ್ದು, ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಬುಧವಾರ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

‘ಯೋಧನ ಸ್ಥಿತಿ ಇನ್ನೂ ಗಂಭೀರವಾಗಿದೆ. ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಮುಂದಿನ 2, 3 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುವುದು’ ಎಂದು ಆರ್ ಆರ್ ಆಸ್ಪತ್ರೆಯ ವೈದ್ಯರು ಐಎಎನ್ಎಸ್ ಗೆ ತಿಳಿಸಿದ್ದಾರೆ.

ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ಸ್ಥಿತಿ ಕೋಮಾ ಸ್ಥಿತಿಯಲ್ಲೇ ಮುಂದುವರಿದಿದ್ದು, ಆರ್ ಆರ್ ಆಸ್ಪತ್ರೆಯ 7 ಜನರ ವೈದ್ಯರ ತಂಡ ಕೊಪ್ಪದ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ನಿನ್ನೆ ರಾತ್ರಿ ನಾವು ಆತನನ್ನು ಐಸಿಯುನಲ್ಲಿ ನೋಡಿದ್ದೇವೆ. ಬುಧವಾರ ಬೆಳಗ್ಗೆ ಮತ್ತೆ 4 ಮಂದಿಗೆ ನೋಡಲು ಅವಕಾಶ ನೀಡಿದ್ದಾರೆ. ನಾವು ಆರು ಮಂದಿ ಬೆಟಗೇರಿಯಿಂದ ದೆಹಲಿಯ ಆರ್ ಆರ್ ಆಸ್ಪತ್ರೆಗೆ ಆಗಮಿಸಿದ್ದೇವೆ. ಕೊಪ್ಪದ್ ಸ್ಥಿತಿ ಬಗ್ಗೆ ಹೇಳಲು ಇನ್ನೂ 3, 4 ದಿನ ಬೇಕೆಂದು ವೈದ್ಯರು ಹೇಳಿರುವುದಾಗಿ ಹನುಮಂತ ಕೊಪ್ಪದ್ ಸಂಬಂಧಿ ಸುಭಾಷ್ ಅವರು ಮಾಧ್ಯಮಕ್ಕೆ ವಿವರಿಸಿದ್ದಾರೆ.

Write A Comment