ರಾಯಚೂರು ,ಫೆ.9- ಗ್ಯಾಸ್ ಸಿಲಿ೦ಡರ್ ಸೋರಿಕೆಯಾಗಿ ಮನೆಗೆ ಬೆ೦ಕಿ ಹತ್ತಿದ ಪರಿಣಾಮ ದ೦ಪತಿ ಸಾವನ್ನಪ್ಪಿರುವ ಘಟನೆ ನಗರದ ಮಾನ್ವಿ ನಗರದ ಬಡಾವಣೆಯಲ್ಲಿ ಸ೦ಭವಿಸಿದೆ. ಮೃತ ದ೦ಪತಿಯನ್ನು ನಾಗಭೂಷಣ(55), ಇ೦ದಿರಾ(46) ಎ೦ದು ಗುರುತಿಸಲಾಗಿದೆ.
ಗ್ಯಾಸ್ ಸೋರಿಕೆಯಿ೦ದ ಮನೆಗೆ ಬೆ೦ಕಿ ಹತ್ತಿದ್ದು, ಅದನ್ನು ನೋಡಲು ದ೦ಪತಿ ತೆರಳಿದಾಗ ಅವರಿಗೆ ಬೆ೦ಕಿ ತಗುಲಿತು. ಸುಟ್ಟ ಗಾಯಗಳಿ೦ದ ನರಳುತ್ತಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಮೃತಪಟ್ಟರೆ೦ದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬ೦ದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆ೦ಕಿ ನ೦ದಿಸುವ ಮೂಲಕ ಮು೦ದಾಗಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದರು. ನೇತಾಜಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊ೦ಡು ಮು೦ದಿನ ಕ್ರಮ ಕೈಗೊ೦ಡಿದ್ದಾರೆ.