ರಾಷ್ಟ್ರೀಯ

ಕೇವಲ 250ರೂ.ಗೆ ಅನಾಥ ಬಾಲಕಿಯನ್ನು ಕೊಂಡು ತಂದು ಬಿಕ್ಷೆಗೆ ಬಿಟ್ಟಿದ್ದ ದಂಪತಿ

Pinterest LinkedIn Tumblr

bಹೈದ್ರಾಬಾದ್, ಫೆ.9-ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆ ಬಸೀರಾಬಾದ್‌ನ ದಂಪತಿ 13ವರ್ಷದ ಬಾಲಕಿಯೊಬ್ಬಳನ್ನು ಕೇವಲ 250ರೂ.ಗೆ ಮುಂಬೈನಲ್ಲಿ ಖರೀದಿಸಿ ತಂದು ಬಿಕ್ಷೆ ಬೇಡಲು ಹಚ್ಚಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಬಾಲಕಿಯನ್ನು ರಕ್ಷಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬಿಕ್ಷೆ ಬೇಡುತ್ತಿದ್ದ ಈ ಬಾಲಕಿಯನ್ನು ಪೂಜ ಎಂದು ಗುರುತಿಸಲಾಗಿದೆ. ಮುಂಬೈನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವಿ.ಬಸಮ್ಮ ಮತ್ತು ವಿ.ರಾಮುಲು ಎಂಬ ದಂಪತಿ ಯಾರೂ ದಿಕ್ಕಿಲ್ಲದ ಪರದೇಶಿ ಬಾಲಕಿಯನ್ನು ಅನಾಮಧೇಯನೊಬ್ಬನಿಂದ 250ರೂ.ಗೆ ಖರೀದಿಗೆ ತಂದು ತಮ್ಮ ಊರಿನಲ್ಲಿ ಬಿಕ್ಷೆ ಬೇಡಲು ಹಚ್ಚಿದ್ದಾರೆ ಎಂದು ರಂಗಾರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೀಮಾ ರಾಜೇಶ್ವರಿ ಹೇಳಿದ್ದಾರೆ.
ಮೊದಲು ಈ ಬಾಲಕಿಯನ್ನು ತಮ್ಮ ಸ್ವಂತ ಊರಾದ ಮಂತಟ್ಟಿ ಗ್ರಾಮದಲ್ಲಿ ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಬಾಲಕಿ ಬೆಳಗ್ಗೆ ಮನೆಗೆಲಸ ಮಾಡಿ ಹೊರಗಡೆ ಹೋಗಿ ಬಿಕ್ಷೆ ಬೇಡಬೇಕಾಗಿತ್ತು. ಸಮೀಪದ ತಂದೂರ್ ಬಸ್ ನಿಲ್ದಾಣಕ್ಕೆ ತೆರಳಿ ಸಂಜೆವರೆಗೆ ಬಿಕ್ಷೆ ಬೇಡಿ ಅದನ್ನು ಮನೆಗೆ ತಂದುಕೊಡುತ್ತಿದ್ದಳು. ಈ ಬಗ್ಗೆ ಸುಳಿವು ದೊರೆತ ಪೊಲೀಸರು ಜ.7ರಂದು ಬಾಲಕಿಯನ್ನು ರಕ್ಷಿಸಿದ್ದಾರೆ. ದಂಪತಿ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.ಇದೇ ವೇಳೆ ರಂಗಾರೆಡ್ಡಿ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿರುವ ಪೊಲೀಸರು 300ಮಂದಿ ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ ಎಂದು ಎಸ್‌ಪಿ ರಾಜೇಶ್ವರಿ ಹೇಳಿದ್ದಾರೆ.

Write A Comment