ಚುನಾವಣೆ ಹತ್ತಿರ ಬರುತ್ತಿದಂತೆ ನಮ್ಮ ನಾಯಕರು ಜನರನ್ನು ಸೆಳೆಯಲು ಎಷ್ಟಾದರೂ ಖರ್ಚು ಮಾಡಲು ತಯಾರಿರುತ್ತಾರೆ. ತಮಿಳುನಾಡಿನ ಪಿಎಂಕೆ ನಾಯಕನೊಬ್ಬ ಚುನಾವಣೆ ಅಂಗವಾಗಿ ತನ್ನ ಮಗನ ಕಿವಿ ಚುಚ್ಚುವ ದೊಡ್ಡ ಸಮಾರಂಭವನ್ನೇ ಏರ್ಪಡಿಸಿದ್ದಾನೆ. ಚುನಾವಣೆಗೂ ಕಿವಿ ಚುಚ್ಚುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿವೆ. ಇದೇ ವೇಳೆ ಪಿಎಂಕೆ ನಾಯಕ ಸುಬಾ ಅರುಳ್ಮಣಿ ತಮ್ಮ ಕ್ಷೇತ್ರದ 80,000 ಮತದಾರರಿಗೆ ತನ್ನ ಮಗನ ಕಿವಿ ಚುಚ್ಚುವ ಸಮಾರಂಭದ ಆಮಂತ್ರಣ ಪತ್ರಿಕೆ ಹಂಚಿದ್ದಾರೆ.
ಅರುಳ್ಮಣಿ 2011ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿಯೂ ಸ್ಪರ್ಧಿಸುತ್ತಿರುವ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ತಮ್ಮ ಮಗನ ಕಿವಿ ಚುಚ್ಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಹಿಂದಿನ ಸೋಲಿನ ಪಾಠ ಕಲಿತು ಈ ರೀತಿಯ “ಜನಪ್ರಿಯ’ ಕಾರ್ಯಕ್ರಮ ಹಮ್ಮಿಕೊಂಡು ಪಕ್ಷದ ಬಲವರ್ಧನೆ ಮಾಡಿದ್ದಾರೆ!
-ಉದಯವಾಣಿ