ಕರ್ನಾಟಕ

ಕಿರುತೆರೆ ನಟಿ ಶಶಿರೇಖಾ ಕೊಲೆ: ಪತಿ ರಮೇಶ್ ಬಂಧನ

Pinterest LinkedIn Tumblr

actor-sashirekha-killed

ಚೆನ್ನೈ: ತಿಂಗಳ ಹಿಂದಷ್ಟೇ ಚೆನ್ನೈನ ಕಸದ ತೊಟ್ಟಿಯಲ್ಲಿ ದೊರಕಿದ್ದ ತಲೆಯಿಲ್ಲ ಮಹಿಳೆಯ ದೇಹ ಇದೀಗ ಕಿರುತೆರೆ ನಟಿ ಶಶಿರೇಕಾ ಅವರದ್ದೇ ಎಂಬು ಪೊಲೀಸರು ಭಾನುವಾರ ಗುರ್ತಿಸಿದ್ದಾರೆ.

ಶಶಿರೇಖಾ (36) ಅವರು ಹಲವು ದಿನಗಳಿಂದ ಕಾಣೆಯಾಗಿದ್ದರು.ಇದಕ್ಕೆ ಸಂಶಯ ಹುಟ್ಟಿಸುವಂತೆ ಚೆನ್ನೈ ನ ಕಸ ಹಾಸುವ ಜಾಗದಲ್ಲಿ ತಲೆಯಿಲ್ಲ ಮಹಿಳೆಯೊಬ್ಬರ ದೇಹವೊಂದು ಪತ್ತೆಯಾಗಿತ್ತು. ಈ ಕುರಿತಂತೆ ತನಿಖೆ ಆರಂಭಿಸಿದ್ದ ಪೊಲೀಸರು ಘಟನೆ ಕುರಿತಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಸಿದ್ದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿರೇಖಾ ಅವರ ಪತಿ ರಮೇಶ್ ಹಾಗೂ ಆತನ ಗೆಳತಿ ನಟಿ ಹಾಗೂ ವ್ಯವಹಾರ ಪಾಲುದಾರರಾಗಿರುವ ಲೌಕಿಯಾ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದರು.

ಇದೀಗ ವಿಚಾರಣೆ ವೇಳೆ ರಮೇಶ್ ಹಾಗೂ ಆತನ ಗೆಳತಿ ಲೌಕಿಯಾ ತಪ್ಪೊಪ್ಪಿಕೊಂಡಿದ್ದು, ಶಶಿರೇಖಾ ಅವರನ್ನು ಕೊಂದಿದ್ದು ನಾವೇ ಎಂದು ಹೇಳಿದ್ದಾರೆ. ಇದರಂತೆ ರಮೇಶ್ ನೀಡಿದ ಮಾಹಿತಿ ಆಧಾರದೇ ಮೇಲೆ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಮಹಿಳೆಯ ದೇಹ ಶಶಿರೇಖಾ ಅವರದ್ದೇ ಎಂದು ಪೊಲೀಸರು ಗುರ್ತಿಸಿದ್ದಾರೆ.

ಈ ಹಿಂದೆ ರಮೇಶ್ ಅವರು ವ್ಯವಹಾರವೊಂದನ್ನು ಮಾಡುತ್ತಿದ್ದರು. ವ್ಯವಹಾರದಲ್ಲಿ ತೀವ್ರ ನಷ್ಟ ಉಂಟಾದ ಹಿನ್ನೆಲೆಯಲ್ಲಿ ರಮೇಶ್ ಅವರ ಮೊದಲ ಪತ್ನಿ ಹಾಗೂ ಆತನ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ನಟನಾ ಕ್ಷೇತ್ರಕ್ಕೆ ಬಂದ ರಮೇಶ್ ನಟನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದವರಿಗೆ ಅವಕಾಶ ಕೊಡಿಸುತ್ತಿದ್ದ. ಅಲ್ಲದೆ, ಅವಕಾಶ ಕೊಡಿಸುತ್ತೇನೆಂದು ಹಲವರ ಬಳಿ ಹಣವನ್ನು ತೆಗೆದುಕೊಂಡು ವಂಚಿಸುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ರಮೇಶ್ ಹಾಗೂ ಲೌಕಿಯಾ 2012ರಿಂದಲೂ ಲಿವಿಂಗ್ ಗೆದರ್ ಸಂಬಂಧದಲ್ಲಿದ್ದು, ಲೌಕಿಯಾ ಅವರನ್ನು ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶವನ್ನು ನೀಡುವುದಾಗಿ ಆಕೆ ತಿಳಿಸಿದ್ದ. ಆದಾವ ಕಾರಣಕ್ಕೋ ಏನೋ ಇಬ್ಬರು ದೂರವಾಗಿದ್ದರು. ನಂತರ ಶಶಿರೇಖಾ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದ ರಮೇಶ್ 2015ರ ಆಗಸ್ಟ್ ತಿಂಗಳಿನಲ್ಲಿ ಆಕೆಯನ್ನು ಮದುವೆಯಾಗಿದ್ದ. ಇವರಿಗೆ 8 ವರ್ಷದ ಮಗುವಿದೆ.

ಕೆಲವು ತಿಂಗಳ ನಂತರ ರಮೇಶ್ ಮತ್ತೆ ಲೌಕಿಯಾ ಜೊತೆ ಸಂಬಂಧವನ್ನು ಮುಂದುವರೆಸಿದ್ದ. ಇದರಿಂದಾಗಿ ಶಶಿರೇಖಾ ಹಾಗೂ ರಮೇಶ್ ಮಧ್ಯೆವಿದ್ದ ದಾಂಪತ್ಯ ಮುರಿದು ಬಿದ್ದಿತ್ತು. ಪತಿಯಿಂದ ಬೇಸತ್ತಿದ್ದ ಶಿಶಿರೇಖಾ ಅವರು ತಮ್ಮ ಮಗುವನ್ನು ರಮೇಶ್ ಅಪಹರಣ ಮಾಡಿದ್ದಾನೆಂದು ಪೊಲೀಸರ ಬಳಿ ದೂರು ದಾಖಲಿಸಿದ್ದರು. ಇದೀಗ ತನಿಖೆಯಲ್ಲಿ ಆ ದೂರು ಸುಳ್ಳು ಎಂದು ತಿಳಿದುಬಂದಿದೆ.

Write A Comment