ಕರ್ನಾಟಕ

ಪತ್ನಿಗಾಗಿ 1 ಲಕ್ಷ ರೂ.ನ ರೇಷ್ಮೆ ಸೀರೆ ಖರೀದಿಸಿದ ಸಿಎಂ

Pinterest LinkedIn Tumblr

BAN-13ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಮಂಗಳವಾರ ತಮ್ಮ ಪತ್ನಿಗಾಗಿ 1 ಲಕ್ಷ ರೂ.ಬೆಲೆಯ ಕಿತ್ತಳೆ ಬಣ್ಣದ ಮೈಸೂರು ಸಿಲ್ಕ್ ಸೀರೆ ಖರೀದಿಸಿದರು. ನಂತರ ಮಾತನಾಡಿದ ಅವರು “ನಾನು ಬಹಳಷ್ಟು ಮೈಸೂರು ಸಿಲ್ಕ್ ಮಳಿಗೆ ಉದ್ಘಾಟಿಸಿದೀನಿ. ಮಳಿಗೆ ಉದ್ಘಾಟಿಸಿ ಇದೇ ಫಸ್ಟ್‌ ಟೈಮ್‌
ಮನೆಯವರಿಗೆ ರೇಷ್ಮೆ ಸೀರೆ ತಗೋತಿದೀನಿ ಕಣ್ರಯ್ಯ ಎಂದರು.

ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯ ಲ್ಲಿನ ಮಹಾನಗರಪಾಲಿಕೆ ಕಾಂಪ್ಲೆಕ್ಸ್‌ನಲ್ಲಿ ಮೈಸೂರು ಸಿಲ್ಕ್ನ ನೂತನ ಮಳಿಗೆ ಉದ್ಘಾಟಿಸಿದ ಸಿಎಂ, ನಂತರ ಮಳಿಗೆಯಲ್ಲಿನ ದಾಸ್ತಾನು ವೀಕ್ಷಿಸಿದರು. ಬಳಿಕ, ತಮಗೆ ಇಷ್ಟವಾದ ಕಿತ್ತಳೆ
ಬಣ್ಣದ ಸೀರೆ ಖರೀದಿಸಿದರು. ಈ ರೇಷ್ಮೆ ಸೀರೆ ಶೇ.65 ರಷ್ಟು ಬೆಳ್ಳಿ, ಶೇ. 0.65 ಚಿನ್ನ ಹಾಗೂ ಸಂಪೂರ್ಣ ಜರಿ ಹೊಂದಿದೆ. ನೀರು ಹಾಕಿದರೂ ಒದ್ದೆಯಾಗದ ಸೀರೆ ಇದು.

ರೇಷ್ಮೆ ಅಭಿವೃದಿಟಛಿ ನಿಗಮದ ಅಧ್ಯಕ್ಷ ಡಿ.ಬಸವ ರಾಜ್‌, “ಬಿಲ್‌ ಬೇಡ ಬಿಡಿ ಸರ್‌’ ಎಂದಾಗ, “ಅದೇನು ಬೇಡ ಕಣಪ್ಪ, ಬಸವರಾಜ್‌ ಬಿಲ್‌ ತಗೊಂಡು ಬಾ…’ ಎಂದು ಸರಸರನೆ ಹೊರಟರು. ನಂತರ, ಕೆಎಸ್‌ಐಸಿ ಸಿಬ್ಬಂದಿ “ಸಿದ್ದರಾಮಯ್ಯ, ಸಿಎಂ, ಕರ್ನಾಟಕ’ ಎಂದು ಬರೆದು 1,09,385 ಮೊತ್ತದ ಬಿಲ್‌ನಲ್ಲಿ ಶೇ.25ರಷ್ಟು (27,436
ರೂ.) ಡಿಸ್ಕೌಂಟ್‌ ಕಳೆದು, 82,039 ರೂ.ನ  ಬಿಲ್‌ ಕೊಟ್ಟರು. ನಂತರ ಹೊರ ಬರುತ್ತಿದ್ದಂತೆ ಕಾಂಗ್ರೆಸ್‌ ಮುಖಂಡ ಅಲ್ಲಾವಲಿ ಗಾಜಿಖಾನ್‌, ಮೈಕ್‌ ನೀಡಿ, ಸೀರೆ ಖರೀದಿ ಬಗ್ಗೆ ಪ್ರತಿಕ್ರಿಯೆ ನೀಡಿ ಸರ್‌, ಎಂದರು.

ಸೀರೆ ಖರೀದಿಸಿದ ಸಿಎಂ “ಹೇ ಬೇಡ ಕಣಪ್ಪ’ ಎನ್ನುತ್ತಲೆ ಮುಂದೆ ನಡೆದರು. ನೆರೆದಿದ್ದ ಜನರು ಸಿದ್ದರಾಮಯ್ಯ ಅವರಿಗೆ ಜೈ ಎಂದು ಘೋಷಣೆ ಕೂಗಿದರು. ಮುಗುಳ್ನಗೆಯೊಂದಿಗೆ ಎಲ್ಲರಿಗೂ ಕೈ ಮುಗಿದು ಹೆಲಿಪ್ಯಾಡ್‌ಗೆ ಹೊರಟರು. ಶಾಸಕರಾದ ಎಸ್‌. ಎಸ್‌.ಮಲ್ಲಿಕಾರ್ಜುನ್‌, ಎಚ್‌.ಎಸ್‌.ಶಿವಶಂಕರ್‌, ವಡ್ನಾಳ್‌ ರಾಜಣ್ಣ, ಕೆ.ಅಬ್ದುಲ್‌ ಜಬ್ಟಾರ್‌, ರೇಷ್ಮೆ ಅಭಿವೃದಿಟಛಿ ನಿಗಮದ ಅಧ್ಯಕ್ಷ ಡಿ. ಬಸವರಾಜ್‌, ನಿಗಮದ ವ್ಯವಸ್ಥಾಪಕ ನಿರ್ದೇಶಕಿ
ನೀಲಾ ಮಂಜುನಾಥ್‌, ಪ್ರಧಾನ ವ್ಯವಸ್ಥಾಪಕ (ಮಾರಾಟ) ಫಿಲೋಮಿನಾ ರಾಜ್‌, ಮಳಿಗೆ ಉಸ್ತುವಾರಿ ರಾಮಾನುಜಂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿ ಫುಲ್‌ ಖುಷ್‌…: ನೂತನ ಮಳಿಗೆ ಉದ್ಘಾಟಿಸಿದ ಮುಖ್ಯಮಂತ್ರಿಯೊಬ್ಬರು ಸೀರೆ ಖರೀದಿಸಿದ್ದು ಇದೇ ಮೊದಲು ಎಂದು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು. ಅನೇಕರು ಮಳಿಗೆ ಉದ್ಘಾಟಿಸಿದ್ದನ್ನು ನೋಡಿದ್ದೇವೆ. ಮಳಿಗೆ ಉದ್ಘಾಟಿಸಿ, ಟೆಸ್ಟ್‌ ಮಾಡಿದ ಸೀರೆಯನ್ನು ಸಿಎಂ ಖರೀದಿ ಮಾಡಿದ್ದಂತೂ ತಮಗೆ ನೆನಪೇ ಇಲ್ಲ ಎಂದು ಹಿರಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರ ರಸ್ತೆಯಲ್ಲಿ ಬೆಳಗ್ಗೆಯಿಂದಲೇ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.
-ಉದಯವಾಣಿ

Write A Comment