
ಬೆಂಗಳೂರು: ಚಿತ್ರ ನಟ ಮತ್ತು ನಿರ್ದೇಶಕ ಉಪೇಂದ್ರ ಅವರು ಕೃಷಿ ಭೂಮಿ ಖರೀದಿಸಲು ಅರ್ಹ ಎಂದು ಹೈಕೋರ್ಟ್ನ ಏಕಸದಸ್ಯ ಪೀಠ ಆದೇಶಿಸಿದೆ.
ತಾವರೆಕೆರೆಯ ಬೆಳ್ಳೂರಿನಲ್ಲಿ ಉಪೇಂದ್ರ ಅವರು 17 ಎಕರೆ 10 ಗುಂಟೆ ಕೃಷಿ ಭೂಮಿ ಖರೀದಿಸಿದ್ದರು. ಆದರೆ ,ಕೃಷಿ ಭೂಮಿ ಖರೀದಿಸಲು ಉಪೇಂದ್ರ ಅರ್ಹರಾಗಿಲ್ಲ. ಭೂ ಕಂದಾಯ ಕಾಯಿದೆ ಸೆಕ್ಷನ್ 79(ಎ, ಬಿ) ಪ್ರಕಾರ ನಿಗದಿತ ಆದಾಯಕ್ಕಿಂತ ಹೆಚ್ಚಿನ ಕೃಷಿಯೇತರ ಆದಾಯ ಹೊಂದಿದ್ದಾರೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಸಹಾಯಕ ಆಯುಕ್ತರು ತೀರ್ಪು ನೀಡಿದ್ದರು. ಈ ಆದೇಶವನ್ನು ಕರ್ನಾಟಕ ಮೇಲ್ಮನವಿ ಪ್ರಾಧಿಕಾರ ಕೂಡ ಎತ್ತಿಹಿಡಿದಿತ್ತು.
ಈ ಆದೇಶ ಪ್ರಶ್ನಿಸಿ ಹೈಕೋಟ್ರ್ ನಲ್ಲಿ ಉಪೇಂದ್ರ ಮೇಲ್ಮನವಿ ಸಲ್ಲಿಸದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆನಂದಭೈರಾರೆಡ್ಡಿ ಅವರಿದ್ದ ನ್ಯಾಯಪೀಠ ಕೃಷಿ ಭೂಮಿ ಖರೀದಿಸಲು ಉಪೇಂದ್ರ ಅರ್ಹರು ಎಂದು ಆದೇಶ ನೀಡಿದೆ. ವಿಚಾರಣೆ ವೇಳೆ ಭೂ ಕಂದಾಯ ಕಾಯಿದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು, ಕೃಷಿಯೇತರ ಆದಾಯದ ಮಿತಿಯನ್ನು ರೂ.25 ಲಕ್ಷಕ್ಕೆ ಏರಿಸಿತ್ತು.
ಈ ತಿದ್ದುಪಡಿ ಕಾಯಿದೆ ಪ್ರತಿಯನ್ನು ಉಪೇಂದ್ರ ಪರ ವಕೀಲರು ಕೋಟ್ರ್ ನಲ್ಲಿಗೆ ಸಲ್ಲಿಸಿದರು. ಬಳಿಕ ಕೃಷಿ ಭೂಮಿ ಖರೀದಿ ವಿವಾದಕ್ಕೆ ಏಕಸದಸ್ಯ ಪೀಠ ತೆರೆ ಎಳೆದಿದೆ.