ಕರ್ನಾಟಕ

ರೂ. 95 ಸಾವಿರಕ್ಕೆ ಕಲಾಕೃತಿ ಖರೀದಿಸಿದ ಪರಮೇಶ್ವರ್

Pinterest LinkedIn Tumblr

DR G PARAMEWSAR  PURCHASE PIC 95 THOUSAND  ARTIST MOHITHSHARMA

ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆದಿರುವ ಚಿತ್ರ ಸಂತೆಯನ್ನು ಉದ್ಘಾಟಿಸಲು ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಲಾವಿದರ ಆಕರ್ಷಕ ಚಿತ್ರಗಳಿಗೆ ಮನಸೋತು 95 ಸಾವಿರ ರೂ. ಬೆಲೆ ಬಾಳುವ ಕಲಾಕೃತಿಯನ್ನು ಖರೀದಿಸಿ, ತಮ್ಮ ಕಲಾಸಕ್ತಿಯನ್ನು ತೋರಿದರು.

ಚಿತ್ರಸಂತೆಯ ಉದ್ಘಾಟನೆಗೂ ಮುನ್ನ ಚಿತ್ರ ಕಲಾವಿದರ ಕಲಾಕೃತಿಗಳನ್ನು ವೀಕ್ಷಿಸುತ್ತಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಉತ್ತರ ಪ್ರದೇಶದ ಅಂಗವಿಕಲ ಕಲಾವಿದ ಮೋಹಿತ್ ವರ್ಮಾ ರಚಿಸಿದ್ದ ಸುಂದರ ಮಹಿಳೆಯ ಚಿತ್ರವನ್ನು ಖರೀದಿಸಿದರು.

`ಸಂಜೆಯ ದೀಪದ ಬೆಳಕಿನಲ್ಲಿ ಅಲಂಕೃತಗೊಂಡು ಗಂಡನ ನಿರೀಕ್ಷೆಗಾಗಿ ಕಾದು ಕುಳಿತಿರುವ ಸುಂದರ ಮಹಿಳೆ’ಯ ಅಪೂರ್ವ ಕಲಾಕೃತಿ ನಿಜಕ್ಕೂ ಆಕರ್ಷಕವಾಗಿತ್ತು. ಈ ಕೃತಿಗೆ ಮನಸೋತ ಗೃಹ ಸಚಿವರು ಯಾವುದೇ ಚೌಕಾಸಿಗೂ ಇಳಿಯದೆ ಕಲಾಕೃತಿಯನ್ನು ಖರೀದಿಸಿ ಸಂತಸಪಟ್ಟರು.

ಖುಷಿಯಾದ ಕಲಾವಿದ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಮ್ಮ ಕೃತಿಯನ್ನು ಖರೀದಿಸಿದ್ದಕ್ಕೆ ಸಂತಸಗೊಂಡ ಉತ್ತರ ಪ್ರದೇಶದ ಕಲಾವಿದ ಮೋಹಿತ್ ವರ್ಮಾ ಇದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣ ಎಂದು ಬಾವುಕರಾದರು.

`ಸಂಜೆವಾಣಿ’ಯೊಂದಿಗೆ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಚಿತ್ರರಚನೆಯಲ್ಲಿ ತೊಡಗಿದ್ದೇನೆ. ಕಳೆದ 7 ವರ್ಷಗಳಿಂದ ಚಿತ್ರಸಂತೆಯಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದೇನೆ. ತಮ್ಮ ಹಲವು ಕಲಾಕೃತಿಗಳು ದೊಡ್ಡ ಮಟ್ಟಕ್ಕೆ ಮಾರಾಟವಾಗಿವೆ. ಇವತ್ತು ಕರ್ನಾಟಕದ ಗೃಹ ಸಚಿವರು ತಮ್ಮ ಕಲಾಕೃತಿಯನ್ನು ಖರೀದಿಸಿರುವುದು ಸಂತಸ ತಂದಿದೆ. ಕಲಾವಿದರಿಗೆ ಒಂದು ರೀತಿ ಉತ್ತೇಜನ ನೀಡಿದಂತಾಗಿದೆ. ಅವರಿಗೆ ಧನ್ಯವಾದಗಳು ಎಂದರು.

Write A Comment