ಕರ್ನಾಟಕ

ಮಹಿಳೆ ಕೊಲೆ ಮಾಡಿ ಆಭರಣ ದೋಚಿ ಪರಾರಿ

Pinterest LinkedIn Tumblr

murder

ಶಿಡ್ಲಘಟ್ಟ: ತಾಲ್ಲೂಕಿನ ಹಂಡಿಗನಾಳ ಪಂಚಾಯತಿಯ ಲಕ್ಕಹಳ್ಳಿ ಗೇಟ್ ಬಳಿ ಬೆಳಿಗ್ಗೆ ಮಹಿಳೆಯನ್ನು ಬರ್ಭರವಾಗಿ ಕೊಲೆ ಮಾಡಿ ಒಡವೆಯನ್ನು ದೋಚಿರುವ ಘಟನೆ ನಡೆದಿದೆ.

ರಾಧಮ್ಮ(48) ಕೊಲೆಯಾದ ಮಹಿಳೆಯಾಗಿದ್ದಾರೆ. ನಗರದಿಂದ ಕೇವಲ 2 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಪಕ್ಕದಲ್ಲೇ ಆನಂದ್ ಎಂಬುವರ ಮನೆಯಿದ್ದು, ಅವರ ಪತ್ನಿ ರಾಧಮ್ಮ ತಮ್ಮ ಮನೆಯ ಹಿಂದೆ ಇರುವ ಹೊಲದಲ್ಲಿ ಬೆಳಿಗ್ಗೆ ಅವರೇಕಾಯಿ ಕೀಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಓಲೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮೃತಪಟ್ಟ ರಾಧಮ್ಮನ ಗಂಡ ನಗರದ ಬಸ್ ನಿಲ್ದಾಣದ ಬಳಿ ದಿನಸಿ ಅಂಗಡಿಯನ್ನಿಟ್ಟಿದ್ದಾರೆ. ಇವರ ಮೂವರು ಹೆಣ್ಣು ಮಕ್ಕಳಿಗೂ ವಿವಾಹವಾಗಿದ್ದು, ಮಗನೊಬ್ಬ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮನೆಯಲ್ಲಿ ಒಬ್ಬಳೇ ಮಹಿಳೆಯಿರುವುದನ್ನು ಹಾಗೂ ಸುತ್ತಮುತ್ತ ಜನ ಸಂಚಾರವಿರದಿರುವುದನ್ನು ಗಮನಿಸಿ ಈ ದುಷ್ಕೃತ್ಯ ಎಸಗಿರಬಹುದೆಂದು ಮೃತಳ ಪತಿ ಆನಂದ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್, ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಎ.ಎಸ್.ಐ ನಾರಾಯಣಸ್ವಾಮಿ ಭೇಟಿ ನೀಡಿದ್ದರು. ಶ್ವಾನ ದಳವನ್ನು ಕರೆಸಲಾಗಿತ್ತು.

Write A Comment