ಕರ್ನಾಟಕ

ಯದುವೀರ್, ಪ್ರಮೋದಾದೇವಿಯವರನ್ನು ತಡೆದ ಎಸ್ ಪಿ ಜಿ

Pinterest LinkedIn Tumblr

yaduver

ಮೈಸೂರು: ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಮೈಸೂರು ವಿ.ವಿ ವತಿಯಿಂದ ಆಯೋಜಿಸಿದ್ದ 103 ನೇ ವಿಜ್ಞಾನ ಮತ್ತು ತಂತ್ರಜ್ಞಾನ ಕಾಂಗ್ರೇಸ್ ಸಮಾವೇಶಕ್ಕೆ ಆಗಮಿಸಿದ್ದ ಯದುವಂಶ ಅರಸರ ಯುವರಾಜ ಯದುವೀರ್, ರಾಜಮಾತೆ ಪ್ರಮೋದಾದೇವಿ ಅವರನ್ನು ಎಸ್ ಪಿ ಜಿ ಪಡೆಯವರು ತಡೆದು ನಿಲ್ಲಿಸಿದ ಘಟನೆ ಇಂದು ಬೆಳಗ್ಗೆ ನಡೆಯಿತು.

ಇಂದು ಬೆಳಗ್ಗೆ ಮೈಸೂರು ವಿ.ವಿ ವತಿಯಿಂದ ಬಂದ ಆಹ್ವಾನಕ್ಕೆ ಮನ್ನಣೆ ನೀಡಿದ್ದ ಪ್ರಮೋದಾದೇವಿಯವರು ತಮ್ಮ ಪುತ್ರನೊಂದಿಗೆ ಆಗಮಿಸಿದರು. ಸಮಾರಂಭದ ವೇದಿಕೆ ಸುತ್ತ ಪ್ರಧಾನ ಮಂತ್ರಿಯವರ ಭದ್ರತಾ ಪಡೆ ಬಿಗಿ ಬಂದೋಬಸ್ತ್ ಮಾಡಿದ್ದರು. ದೇಶ ವಿದೇಶಗಳಿಂದ ಆಗಮಿಸಿದ್ದ ಗಣ್ಯರನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿ ಬಿಡಲಾಗುತ್ತಿತ್ತು. ವಿಐಪಿ ಪ್ರವೇಶ ದ್ವಾರದ ಮೂಲಕ ಆಗಮಿಸಿದ್ದ ರಾಜವಂಶಸ್ಥರನ್ನು ವೇದಿಕೆಯ ಮುಂಭಾಗಕ್ಕೆ ಹೋಗಲು ಎಸ್ ಪಿಜಿ ಪಡೆ ನಿರಾಕರಿಸಿದರು.

ಇದರಿಂದ ಗೊಂದಲಕೀಡಾದ ಯದುವೀರ್, ಪ್ರಮೋದಾದೇವಿಯವರು ಕೆಲಕಾಲ ಸುಮ್ಮನೆ ನಿಂತರು. ಸ್ಥಳೀಯ ಪೋಲಿಸರು ಎಷ್ಟೇ ಮನವಿ ಮಾ‌ಡಿದರು ಪ್ರಯೋಜನವಾಗಲಿಲ್ಲ. ಕೊನೆಗೆ ಅವರನ್ನು ವೇದಿಕೆಯ ಮುಂಭಾಗದಲ್ಲಿ ಹಾಕಲಾಗಿದ್ದ ಸಾಮಾನ್ಯ ವಿಐಪಿ ಗಳ ಗ್ಯಾಲರಿಗೆ ಪ್ರವೇಶ ಕಲ್ಪಿಸಿಕೊಟ್ಟರು. ಮೈಸೂರು ವಿ.ವಿ ಸ್ಥಾಪನೆಗೆ ತನ್ನದೇ ಆದ ಕೊಡುಗೆ ನೀಡಿದ್ದ ಒಡೆಯರ್ ವಂಶಸ್ಥರಿಗೆ ಈ ರೀತಿ ಅವಮಾನ ಮಾಡಿದ್ದು ಸರಿಯಲ್ಲ. ಅವರಿಗಾಗಿ ವಿಶೇಷ ಆಸನದ ವ್ಯವಸ್ಥೆ ಮಾಡುವ ಸೌಜನ್ಯ ತೋರದ ವಿ.ವಿ ಕುಲಪತಿಗಳ ನಡತೆ ಕೆಲಕಾಲ ಚರ್ಚೆಗೆ ಗ್ರಾಸವಾಯಿತು.

Write A Comment