ಕರ್ನಾಟಕ

ಹಾಡಿಯಲ್ಲಿ ಆಂಜನೇಯ ವರ್ಷಾಚರಣೆ

Pinterest LinkedIn Tumblr

an

ಬೆಂಗಳೂರು: ಕಳೆದ ವರ್ಷ ಕೊಳ್ಳೇಗಾಲ ತಾಲೂಕಿನ ಗೊಂಬೆಗಲ್ಲು ಹಾಡಿಯ ಬುಡಕಟ್ಟು ಜನರೊಂದಿಗೆ ಹೊಸ ವರ್ಷಾಚರಣೆ ಮಾಡಿದ್ದ ಎಚ್.ಆಂಜನೇಯ, ಈ ಬಾರಿ ಡಿ.31ರಂದು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ದಟ್ಟ ಅರಣ್ಯಪ್ರದೇಶದಲ್ಲಿನ ವಾಡಾ ಎಂಬ ಸಿದ್ದಿ ಸಮುದಾಯದ ಹಾಡಿಯಲ್ಲಿ ವಾಸ್ತವ್ಯ ಹೂಡಿ ಹೊಸ ವರ್ಷ ಆಚರಿಸಲಿದ್ದಾರೆ.

ಡಿ.31ರಂದು ಬೆಳಗ್ಗೆ ಜಿಲ್ಲಾಡಳಿತದೊಂದಿಗೆ ಹಾಡಿಗೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸಿ, ಸೌಲಭ್ಯಗಳನ್ನು ವಿತರಣೆ ಮಾಡಲಾಗುವುದು. ಸಂಜೆ ಸಿದ್ದಿ ಸಮುದಾಯದ ಸಾವೇರ ಕೈತಾನ್​ಗಾಡಿ ಮತ್ತು ಕ್ಲೇರಾ ಮನೆಯಲ್ಲಿ ವಾಸ್ತವ್ಯ ಹೂಡಿ ಸರಳವಾಗಿ 2016ನೇ ವರ್ಷವನ್ನು ಸ್ವಾಗತಿಸಲಾಗುವುದು ಎಂದು ಸಚಿವ ಆಂಜನೇಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೋಬಳಿಗೊಂದು ವಸತಿ ಶಾಲೆ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರತಿ ಹೋಬಳಿಯಲ್ಲೊಂದು ತಲಾ 10 ಎಕರೆ ಪ್ರದೇಶದಲ್ಲಿ 15 ಕೋಟಿ ರೂ.ವೆಚ್ಚ ಮಾಡಿ ವಸತಿ ಶಾಲೆ ಆರಂಭಿಸಲಾಗುವುದು. 6ರಿಂದ 10ನೇ ತರಗತಿವರೆಗೆ ಸೀಮಿತವಾಗಿರುವ ವಸತಿ ಶಾಲೆಗಳನ್ನು 12ನೇ ತರಗತಿವರೆಗೆ ಹಂತಹಂತವಾಗಿ ವಿಸ್ತರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

Write A Comment