ಕರ್ನಾಟಕ

ಗಾರ್ವೆಬಾವಿ ಪಾಳ್ಯದ ಪ್ಲೈವುಡ್ ಗೋಡೌನಲ್ಲಿ ಆಕಸ್ಮಿಕ ಬೆಂಕಿ

Pinterest LinkedIn Tumblr

fire_rep

ಬೆಂಗಳೂರು: ಬೆಂಗಳೂರಿನ ಹೊಸೂರು ರಸ್ತೆ ಬಳಿಯ ಗಾರ್ವೆಬಾವಿ ಪಾಳ್ಯದಲ್ಲಿರುವ ಪ್ಲೈವುಡ್ ಗೋಡೌನ್ ಅಗ್ನಿಗಾಹುತಿಯಾಗಿದೆ. ಮಂಗಳವಾರ ಅಪರಾಹ್ನ 2.30 ಹೊತ್ತಿಗೆ ಈ ಘಟನೆ ನಡೆದಿದೆ. ಪ್ಲೈವುಡ್ ಗೋಡೌನ್ ಆಗಿರುವುದರಿಂದ ಬೇಗನೆ ಬೆಂಕಿ ಹಬ್ಬಿದ್ದು, ಅದನ್ನು ನಂದಿಸಲು ಸುಮಾರು 3 ಗಂಟೆಗಳೇ ಬೇಕಾಯಿತು.

ಇದೀಗ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು, ಸುತ್ತ ಮುತ್ತಲ ಮನೆಯಲ್ಲಿರುವ ಜನರನ್ನು ಬೇರೆಡೆಗೆ ತೆರವುಗೊಳಿಸಿದ್ದಾರೆ.

ಈ ಅಗ್ನಿ ಅವಘಡದಲ್ಲಿ ಜನರಿಗೆ ಯಾವುದೇ ಹಾನಿಯಾಗಿಲ್ಲ, ಆದರೆ ಅಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿವೆ

ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment