ಅಂತರಾಷ್ಟ್ರೀಯ

ಬೊಕೊ ಹರಾಮ್ ಉಗ್ರರ ದಾಳಿಗೆ 80ಕ್ಕೂ ಹೆಚ್ಚು ನಾಗರಿಕರು ಬಲಿ

Pinterest LinkedIn Tumblr

boko

ನೈಜೀರಿಯಾ, ಡಿ.29-ಬೊಕೊ ಹರಾಮ್ ಉಗ್ರರು ನಡೆಸಿದ ವಿಧ್ವಂಸಕ ದಾಳಿಯಲ್ಲಿ 80ಕ್ಕೂ ಹೆಚ್ಚು ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ಮೈದುಗುಡಿಯಲ್ಲಿ ನಡೆದ ಕಾರ್ ಬಾಂಬ್ ಆತ್ಮಾಹುತಿ ದಾಳಿಗೆ 55 ಜನ ಬಲಿಯಾಗಿ, 124 ಜನ ಗಾಯಗೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ 30 ಮಂದಿ ಮೃತಪಟ್ಟು 90 ಜನ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಘಟಕದ ಸಂಚಾಲಕ ಮಹಮ್ಮದ್ ಕಿನಾರ್ ಹೇಳಿದ್ದಾರೆ. ನಾವು ತಾಂತ್ರಿಕವಾಗಿ ಯುದ್ಧದಲ್ಲಿ ಗೆದ್ದಿದ್ದೇವೆ. ಬೊಕೊ ಹರಾಮ್ ವಿರುದ್ಧ ನಾವು ಮೇಲುಗೈ ಸಾಧಿಸಿದ್ದೇವೆ ಎಂದು ನೈಜೀರಿಯಾ ಅಧ್ಯಕ್ಷ ಮಹಮ್ಮದ್ ಬುಹಾರಿ ಘೋಷಿಸಿದ ಬೆನ್ನಲ್ಲೇ ಉಗ್ರರು ಈ ಪೈಶಾಚಿಕ ಕೃತ್ಯಗಳನ್ನು ನಡೆಸಿದ್ದಾರೆ.

ನನ್ನ ಕುಟುಂಬದವರೊಂದಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಹರಾಮ್‌ಗಳು ನಡೆಸಿದ ದಾಳಿಗೆ ನಾನು ಗಾಯಗೊಂಡು ಉಳಿದೆ. ಆದರೆ ನನ್ನ ಕುಟುಂಬದವರೆಲ್ಲ ಸಾವನ್ನಪ್ಪಿದರು ಎಂದು ಗೋಳಾಡುತ್ತಾನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾದಿಕ್ ಮಹಮದ್.

Write A Comment