ಬೆಂಗಳೂರು, ಡಿ.25- ಮದುವೆಯಾಗುವುದಾಗಿ ನಂಬಿಸಿ ತನ್ನ ಜತೆ ಲೈಂಗಿಕ ದೌರ್ಜನ್ಯ ನಡೆಸಿ ಇದೀಗ ನನ್ನಿಂದ ದೂರವಾಗಿದ್ದಾನೆ ಎಂದು ವ್ಯಕ್ತಿಯೊಬ್ಬನ ವಿರುದ್ಧ ಮಹಿಳೆ ಹಲಸೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಭುಜಿತ್‌ಸಿಂಗ್ ಎಂಬಾತನ ಮೇಲೆ 31 ವರ್ಷದ ಮಹಿಳೆ ಅತ್ಯಾಚಾರದ ದೂರು ನೀಡಿದ್ದಾಳೆ. ಈ ಮಹಿಳೆ ಸಹ ಬೇರೆ ರಾಜ್ಯದವರಾಗಿದ್ದು, ಪ್ರಭುಜಿತ್‌ಸಿಂಗ್ ಪರಿಚಿತನಾಗಿ ಅದು ಸ್ನೇಹಕ್ಕೆ ತಿರುಗಿ ತದನಂತರ ಇಬ್ಬರಲ್ಲಿ ಪ್ರೀತಿ ಮೂಡಿ ಡಿಸೆಂಬರ್‌ನಲ್ಲಿ ಮದುವೆ ಆಗೋಣ ಎಂದು ನಂಬಿಸಿ ಒಂದೇ ಮನೆಯಲ್ಲಿ ಲಿವಿಂಗ್‌ಟುಗೆದರ್ ರೀತಿ ವಾಸವಾಗಿದ್ದರು.
ಈ ವೇಳೆ ಮಹಿಳೆ ಜತೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಭುಜಿತ್‌ಸಿಂಗ್ ಇದೀಗ ಮದುವೆಯಾಗಲು ನಿರಾಕರಿಸಿದ್ದು, ನನಗೆ ಅನ್ಯಾಯವಾಗಿದೆ ಎಂದು ಹಲಸೂರು ಪೊಲೀಸರ ಮೊರೆ ಹೋಗಿದ್ದಾಳೆ.