ಕರ್ನಾಟಕ

ಶ್ರಿನಿವಾಸನಿಗಾಗಿ ದೇವಾಲಯದಲ್ಲೇ ಮಹಿಳೆಯರ ಜಟಾಪಟಿ

Pinterest LinkedIn Tumblr

sriniಬೆಂಗಳೂರು, ಡಿ.21- ವೈಕುಂಠ   ಏಕಾದಶಿ ಪ್ರಯುಕ್ತ ದೇವಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರು ಗಂಡನೊಂದಿಗೆ ಬಂದಿದ್ದ ಮತ್ತೊಬ್ಬ ಮಹಿಳೆ ಜತೆ ಜಗಳವಾಡಿದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಮಹಾಲಕ್ಷ್ಮೀಲೇಔಟ್‌ನಲ್ಲಿ ನಡೆದಿದೆ.

ಮಹಾಲಕ್ಷ್ಮೀಲೇಔಟ್‌ನ ನಿವಾಸಿ ರಮ್ಯಾ ಎಂಬುವರು ಆಂಜನೇಯ ದೇವಸ್ಥಾನ ಬಳಿಯ ಶ್ರೀನಿವಾಸ ದೇವಾಲಯಕ್ಕೆ ಬೆಳಗ್ಗೆ ಬಂದಿದ್ದಾರೆ. ಆಗ ದೇವರ ಬಳಿ ಪತಿ ಶ್ರೀನಿವಾಸ್ ಬೇರೊಬ್ಬ ಮಹಿಳೆಯೊಂದಿಗೆ ಪೂಜೆ ಸಲ್ಲಿಸುತ್ತಿರುವುದು ಕಂಡಿದೆ.  ಅವರನ್ನು ಹಿಂಬಾಲಿಸಿ ಹೋದ ರಮ್ಯಾ ಪತಿ ಜತೆಗೆ ಇದ್ದ ಮಹಿಳೆಯನ್ನು ಯಾರೆಂದು ವಿಚಾರಿಸಿದಾಗ ಇಬ್ಬರ ನಡುವೆ ಜಗಳವಾಗಿದೆ. ಪತ್ನಿ ಹಾಗೂ ಮಹಿಳೆಯ ನಡುವಿನ ಜಗಳದ ವೇಳೆ ಗಂಡ ಶ್ರೀನಿವಾಸ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಹಿಳೆಯರಿಬ್ಬರೂ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ತೆರಳಿ ದೂರು ಪ್ರತಿದೂರು ದಾಖಲಿಸಿದ್ದಾರೆ.

ಎರಡೂ ದೂರುಗಳನ್ನು ದಾಖಲಿಸಿ ಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪತಿ ಶ್ರೀನಿವಾಸ್ ವಿರುದ್ಧ ರಮ್ಯಾ ಅವರು ನಂದಿನಿಲೇಔಟ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ದಂಪತಿ ಬೇರೆ ಬೇರೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment