ಕರ್ನಾಟಕ

ಸಾಹಿತಿ ಕಲ್ಬುರ್ಗಿ ಮತ್ತು ಬರಹಗಾರ ದಾಬೋಲ್ಕರ್ ಹತ್ಯೆಗೂ ಸಂಬಂಧವಿದೆ : ಗೃಹ ಸಚಿವ ಪರಮೇಶ್ವರ್

Pinterest LinkedIn Tumblr

parameshಬೆಂಗಳೂರು, ಡಿ.16- ಹಿರಿಯ ಸಾಹಿತಿ, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಹಾಗೂ ಪ್ರಗತಿಪರ ಬರಹಗಾರ ದಾಬೋಲ್ಕರ್ ಹತ್ಯೆಗೂ ಮೇಲ್ನೋಟಕ್ಕೆ ಸಂಬಂಧವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಸಿಬಿಐಗೆ ಯಾವುದೇ ಪೂರಕ ಮಾಹಿತಿ ಬಂದಿಲ್ಲ. ಸಿಐಡಿ ಎಚ್ಚರಿಕೆಯಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಹತ್ಯೆ ಮಾಡಿದವರ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.

ಕೇಂದ್ರ ಗೃಹಖಾತೆ ಸಚಿವರು ಈ ಪ್ರಕರಣಗಳಿಗೆ ಸಂಬಂಧ-ಹೊಂದಾಣಿಕೆ ಇಲ್ಲ ಎಂದು ಹೇಳಿದ್ದರು. ಕಲಬುರ್ಗಿ ಹತ್ಯೆ ಸಂಬಂಧವಾಗಿ ಬೇರೆ ಬೇರೆ ವ್ಯಾಖ್ಯಾನವಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ಸಿಐಡಿಗೆ ಹಣವಿಲ್ಲ, ತನಿಖೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ. ಸಿಐಡಿ ತನಿಖೆ ಮುಂದುವರೆಸಿದ್ದು, ಕಲಬುರ್ಗಿ ಹತ್ಯೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Write A Comment