ಕರ್ನಾಟಕ

ಬಿಗ್ ಬಾಸ್ ಮನೆಯಿಂದ ಆರ್.ಜೆ ನೇತ್ರ ಹೊರಗೆ…?

Pinterest LinkedIn Tumblr

RJ-Netra-Bigg-Boss-Kannada

ಏಳು ವಾರಗಳ ಕಾಲ ‘ಬಿಗ್ ಬಾಸ್’ ಮನೆಯಲ್ಲಿ ಜಾಗರೂಕರಾಗಿ ಆಟವಾಡಿದ್ದ ಆರ್.ಜೆ ನೇತ್ರ ಈ ವಾರ ‘ಬಿಗ್ ಬಾಸ್-3’ ಕಾರ್ಯಕ್ರಮದಿಂದ ಔಟ್ ಆಗಿದ್ದಾರೆಂಬ ಮಾಹಿತಿ ಲೀಕ್ ಆಗಿದೆ.

‘ಕಲರ್ಸ್ ಕನ್ನಡ’ ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಸುದ್ದಿ ಪ್ರಕಾರ, ಈ ವಾರ ನೇತ್ರ ‘ಬಿಗ್ ಬಾಸ್’ ಮನೆಯಿಂದ ನಿರ್ಗಮಿಸಿದ್ದಾರೆ. ಕೆಲವೇ ನಿಮಿಷಗಳ ಹಿಂದೆಯಷ್ಟೆ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದ ಶೂಟಿಂಗ್ ಮುಗಿದಿದೆ. ಅದರಲ್ಲಿ ಕಿಚ್ಚ ಸುದೀಪ್ ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಪಂಚಾಯಿತಿ ಮಾಡಿದ ಬಳಿಕ ಆರ್.ಜೆ ನೇತ್ರ ರವರನ್ನ ಹೊರಗಡೆ ಕರೆದಿದ್ದಾರಂತೆ.

ಆರ್.ಜೆ ನೇತ್ರ ರವರು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು. ಕಳೆದ ವಾರ ‘ಅತಿಥಿ ದೇವೋ ಭವ’ ಟಾಸ್ಕ್ ನಲ್ಲಿ ‘ಶ್ರುತಿ ಹೋಟೆಲ್’ ಸೋತ ಕಾರಣ, ತಂಡದಲ್ಲಿದ್ದ ಶ್ರುತಿ, ನೇತ್ರ, ಕಿಟ್ಟಿ, ರೆಹಮಾನ್ ಮತ್ತು ಕೃತಿಕಾ ನಾಮಿನೇಟ್ ಆಗಿದ್ದರು. ಇತರರಿಗಿಂತ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಆರ್.ಜೆ.ನೇತ್ರ ಔಟ್ ಆಗಿದ್ದಾರೆ ಅಂತ ಹೇಳಲಾಗಿದೆ.

Write A Comment