ರಾಷ್ಟ್ರೀಯ

ಪಿಸ್ತೂಲ್ ಸಮೇತ ವಿಮಾನ ಪ್ರಯಾಣ ವ್ಯಕ್ತಿ ಸೆರೆ

Pinterest LinkedIn Tumblr

 pistool-in-kapsel

ನವದೆಹಲಿ,ಡಿ.12: ಪಿಸ್ತೂಲ್ ಮತ್ತು 13 ಜೀವಂತ ಗುಂಡುಗಳನ್ನು ಇಟ್ಟುಕೊಂಡು ಸಾಗುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮಹಾರಾಷ್ಟ್ರದ ದ್ಹೆಲೆ ಜಿಲ್ಲೆಯ ಲಕ್ಷ್ಮಿ ನಗರದ ಕಮಲಾಕರ್ ರಘುನಾತ್ ಅಹಿರೋ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ಪಕ್ಷವೊಂದರ ಮುಖಂಡರಾಗಿರುವ ಈತ ಇಂಧೋರ್‍ನಿಂದ ದೆಹಲಿಗೆ ಪ್ರಯಾಣಿಸಿದ್ದ, ಆತನ ಬ್ಯಾಗ್‍ನಲ್ಲಿದ್ದ ಪಿಸ್ತೂಲ್ ಮತ್ತು ಕಾಟ್ರೇಜ್‍ನನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಲಾಗಿದೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಅಹಿರೋ ಅವರನ್ನು ಬಂಧಿಸಲಾಗಿದ್ದು ಆ ಬಳಿಕ ಶಸ್ತ್ರಾಸ್ತ್ರ ಪರವಾನಿಗೆ ಬಗ್ಗೆ ಅನುಮತಿ ಪತ್ರ ತೋರಿಸಿದರೂ ಪೋಲಿಸರು ಅದನ್ನು ಒಪ್ಪಿಕೊಳ್ಳದೆ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Write A Comment