ಕರ್ನಾಟಕ

ವೌಢ್ಯ ನಿಷೇಧ ಕಾನೂನು- ವರದಿಯ ಅಧ್ಯಯನ: ಜಯಚಂದ್ರ

Pinterest LinkedIn Tumblr

T_B_Jayachandra

ಬೆಂಗಳೂರು, ಡಿ.9: ವೌಢ್ಯಚರಣೆ ನಿಷೇಧ ಕಾನೂನು ಜಾರಿಗೆ ಸಂಬಂಧ ಪರಿಶೀಲನಾ ಸಮಿತಿಯಲ್ಲಿ ಚರ್ಚೆ ನಡೆಯುತ್ತಿದೆ. ಹಿಮಾಚಲ ಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿರುವ ಕಾನೂನುಗಳು, ಕಾನೂನು ಆಯೋಗ, ರಾಷ್ಟ್ರೀಯ ಕಾನೂನು ಶಾಲೆಗಳು ನೀಡಿರುವ ವರದಿಗಳ ಅಧ್ಯಯನ ನಡೆಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ವೌಢ್ಯದ ಹಿಂದಿರುವ ಹಿಂಸೆಯನ್ನು ತಡೆಯ ಬೇಕೆಂಬುದು ನಮ್ಮ ಉದ್ದೇಶ. ಡಿಜಿಟಲ್ ಇಂಡಿಯಾ, ತಂತ್ರಜ್ಞಾನ ಕ್ರಾಂತಿಯ ಬಗ್ಗೆ ಮಾತ ನಾಡುವ ನಾವು, ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಿಷೇಧಿಸುವ ಸಂಬಂಧ ಸಿಎಂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಅವರು ಹೇಳಿದರು.

Write A Comment