ಅಂತರಾಷ್ಟ್ರೀಯ

ಬುಲೆಟ್ ಟ್ರೈನ್‌ಗೆ ರಂಗ ಸಜ್ಜು: ಜಪಾನ್ ಜೊತೆ ಒಪ್ಪಂದಕ್ಕೆ ಈ ವಾರ ಅಂಕಿತ

Pinterest LinkedIn Tumblr

bullet train

ಟೋಕಿಯೊ,ಡಿ.9: ದೇಶದ ಮೊದಲ ಬುಲೆಟ್ ರೈಲಿಗಾಗಿ ಜಪಾನ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಲು ಭಾರತವು ಸಜ್ಜಾಗಿದೆ. ಮುಂಬೈ-ಅಹ್ಮದಾಬಾದ್ ನಡುವೆ ಸಂಚರಿಸುವ ಈ ಅತ್ಯಂತ ವೇಗದ ರೈಲು ಯೋಜನೆಗೆ ಬಹು ಪಾಲು ನೆರವನ್ನು ಜಪಾನ್ ಎಂಟು ಶತಕೋಟಿ ಡಾ.ಸಾಲದ ಮೂಲಕ ಒದಗಿಸಲಿದೆ ಎಂದು ಇಲ್ಲಿಯ ಪ್ರಮುಖ ವಾಣಿಜ್ಯ ದೈನಿಕ ‘ದಿ ನಿಕ್ಕಿ’ಮಂಗಳವಾರ ವರದಿ ಮಾಡಿದೆ.

ಪ್ರಧಾನಿ ಶಿಂಜೊ ಅಬೆಯವರು ತನ್ನ ಭಾರತ ಭೇಟಿಯ ಸಂದರ್ಭ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಪ್ಪಂದದ ಕುರಿತು ಜಂಟಿ ಹೇಳಿಕೆಯೊಂದನ್ನು ನೀಡಲಿದ್ದಾರೆ ಎಂದು ಅದು ತಿಳಿಸಿದೆ.

ಮುಂಬೈ ಮತ್ತು ಅಹ್ಮದಾಬಾದ್ ನಡುವೆ 505 ಕಿ.ಮೀ.ಉದ್ದದ ರೈಲುಮಾರ್ಗ ನಿರ್ಮಾಣದ ಅಂದಾಜು 14.6 ಶತಕೋಟಿ ಡಾ.ಗಳ ಈ ಯೋಜನೆಗೆ ಜಪಾನಿನ 8.1 ಶತಕೋಟಿ ಡಾ.ಗೂ ಅಧಿಕ ಸಾಲದ ಕೊಡುಗೆಯನ್ನು ಅಬೆ ಭಾರತದ ಮುಂದಿಡಲಿದ್ದಾರೆ ಎಂದು ಅದು ಹೇಳಿದೆ.

ಭಾರತದೊಂದಿಗೆ ಒಪ್ಪಂದ ಜಪಾನ್ ತನ್ನ ಬುಲೆಟ್ ರೈಲು ತಂತ್ರಜ್ಞಾನವನ್ನು ರಫ್ತು ಮಾಡುವ ಎರಡನೆ ಯಶಸ್ವಿ ಪ್ರಕರಣವಾಗಲಿದೆ. 2007ರಲ್ಲಿ ಅದು ತೈವಾನ್‌ನೊಂದಿಗೆ ಇಂತಹ ಮೊದಲ ಒಪ್ಪಂದವನ್ನು ಮಾಡಿಕೊಂಡಿತ್ತು.

ಆದರೆ ಈ ವರ್ಷದ ಆರಂಭದಲ್ಲಿ ಇಂಡೋನೇಶಿಯಾದೊಂದಿಗೆ ಬುಲೆಟ್ ರೈಲು ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಜಪಾನ್ ವಿಫಲಗೊಂಡಿತ್ತು. ಆ ಯೋಜನೆಯನ್ನು ಚೀನಾ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು.

Write A Comment