ಕರ್ನಾಟಕ

ನಟ ಸುದೀಪ್-ಶಿವಣ್ಣರನ್ನು ಒಟ್ಟು ಸೇರಿಸಿದ ರೀತಿಯಲ್ಲಿಯೇ ಸಿಎಂ ಸಿದ್ದು-ಎಚ್ ಡಿಕೆಯವರನ್ನು ಒಂದುಗೂಡಿಸುತ್ತಿದ್ದಾರೆ ನಿರ್ದೇಶಕ ಪ್ರೇಮ್ !

Pinterest LinkedIn Tumblr

shivanna

ಬೆಂಗಳೂರು: ಸಿನೆಮಾಗೆ ರಾಜಕೀಯ ಭಾಷೆ ಇಲ್ಲವೆಂಬುದಕ್ಕೆ ಇಲ್ಲಿದೆ ಉದಾಹರಣೆ. ಸಿ ಆರ್ ಮನೋಹರ್ ನಿರ್ಮಾಣದ ಸಿನೆಮಾಗೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತರಲು ಯಶಸ್ವಿಯಾಗಿರುವ ನಿರ್ದೇಶಕ ಪ್ರೇಮ್ ಈಗ ವಿರೋಧಿ ರಾಜಕೀಯ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜನತಾ ದಳ ಜಾತ್ಯಾತೀತ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರನ್ನು ಕೂಡ ಒಗ್ಗೂಡಿಸಲಿದ್ದಾರಂತೆ.

ಈ ಇಬ್ಬರೂ ರಾಜಕೀಯ ನಾಯಕರು ಒಟ್ಟಿಗೆ ಸಿನೆಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಡಿಸೆಂಬರ್ 13 ರಂದು ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಮನೋಹರ್ ಅವರು ವಿಧಾನ ಪರಿಷತ್ತಿನ ಅಭ್ಯರ್ಥಿಯಾಗಿರುವುದರಿಂದ ಇನ್ನೂ ಹೆಚ್ಚಿನ ರಾಜಕಾರಿಣಿಗಳು ಸೇರುವ ಸೂಚನೆಯಿದೆ.

ಸಿನೆಮಾ ಬಗ್ಗೆ ತುಟಿಬಿಚ್ಚದ ನಿರ್ದೇಶಕ ಪ್ರೇಮ್ ಇದು ಸಾಮಾನ್ಯವಾದ ಸಿನೆಮಾ ಅಲ್ಲ ಎಂದಷ್ಟೇ ಹೇಳುತ್ತಾರೆ. ೧೦೦ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿರುವ ಈ ಸಿನೆಮಾಗೆ ಇನ್ನೂ ಇತರೆ ದೊಡ್ಡ ನಟರ ತಾರಾಗಣವೆ ಇರಲಿದೆ ಎನ್ನಲಾಗಿದೆ. ಇದು ಬಹುಭಾಷಾ ಚಲನಚಿತ್ರವಾಗಿದ್ದು ಹೊಸವರ್ಷಕ್ಕೆ ಚಿತ್ರೀಕರಣ ಪ್ರಾರಂಭವಗಲಿದೆಯಂತೆ.

Write A Comment