ಕನ್ನಡ ವಾರ್ತೆಗಳು

ವಿಜ್ಞಾನ ಮೇಳ – ರಾಜ್ಯ ಮಟ್ಟದಲ್ಲಿ ‘ಎ’ ಹಾಗೂ ’ ಬಿ’ ಗ್ರೇಡ್ ಬಹುಮಾನ

Pinterest LinkedIn Tumblr

Science_Fair_Winners_1

ಬದಿಯಡ್ಕ,ಡಿ.08 : ಕಾಸರಗೋಡು ಜಿಲ್ಲಾ ವಿಜ್ಞಾನ ಮೇಳದಲ್ಲಿ ದ್ವಿತೀಯ ಬಹುಮಾನ ಗಳಿಸಿ ಕೊಲ್ಲಂನಲ್ಲಿ ಜರಗಿದ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯು ‘ಎ’ ಹಾಗೂ ’ ಬಿ’ ಗ್ರೇಡ್ ಬಹುಮಾನ ಪಡೆದಿದೆ.

Science_Fair_Winners_2

ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಅಕ್ಷತಾ.ಡಿ (ಎಡನಾಡು ಗ್ರಾಮದ ಡಿ.ಗಣಪತಿ ಭಟ್ – ಸಾವಿತ್ರಿ ಇವರ ಪುತ್ರಿ) ಮತ್ತು ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕರೆ – ಭಾರತಿ. ಎಂ.ಜಿ ಇವರ ಪುತ್ರಿ) ಮಾಲಿನ್ಯ ಸಂಸ್ಕರಣೆಯ ಕುರಿತಾಗಿ ಪ್ರದರ್ಶಿಸಿದ ಸ್ಥಿರ ಮಾದರಿಯು ‘ಬಿ’ ಗ್ರೇಡ್ ಹಾಗೂ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಚಿನ್ಮಯ ಭಟ್.ಕೆ.ಕೆ (ಕಳತ್ತೂರು ಕಲ್ಪತರು ನಿವಾಸಿ ಕೆ.ಕೆ.ಲಕ್ಷ್ಮೀನಾರಾಯಣ ಭಟ್ – ಪರಮೇಶ್ವರಿ.ಕೆ.ಕೆ ಇವರ ಪುತ್ರ) ಮತ್ತು ಶರಣ್ ಕುಮಾರ್ (ಬೇಳ ದೊಡ್ಡಡ್ಕ ನಿವಾಸಿ ಹರಿಶ್ಚಂದ್ರ ಶೆಟ್ಟಿ – ಶಾಲಿನಿ ಇವರ ಪುತ್ರ) ಜೈವಿಕ ಕೀಟನಾಶಕದ ಕುರಿತಾಗಿ ಮಂಡಿಸಿದ ಸಂಶೋಧನಾತ್ಮಕ ಪ್ರೋಜೆಕ್ಟ್ ‘ಎ’ ಗ್ರೇಡ್ ಸಹಿತ ಬಹುಮಾನವನ್ನು ಪಡೆದಿದೆ.

Write A Comment