ಕರ್ನಾಟಕ

ಬಯಲಲ್ಲೇ ಮಗುವಿಗೆ ಜನ್ಮ ನೀಡಿದ ನಿರಾಶ್ರಿತ ಗೋವಾ ಕನ್ನಡದ ಮಹಿಳೆ !

Pinterest LinkedIn Tumblr

baby

ಅಂದು ಇದ್ದದ್ದೊಂದು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದ ವಿಜಾಪುರದ ಕನ್ನಡಿಗ ಕುಟುಂಬವೊಂದರ ಮಹಿಳೆ ಈಗ ಗೋವಾದ ಮಾಪ್ಸಾದ ಬಯಲಲ್ಲೇ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.

ಹೌದು, 20ಕ್ಕೂ ಹೆಚ್ಚು ವರ್ಷಗಳಿಂದ ವಾಸ್ಕೋದ ಬೈನಾದಲ್ಲಿ ನೆಲೆಕಂಡುಕೊಂಡಿದ್ದ ಹನುಮವ್ವ ನಾಗಪ್ಪ ದಂಪತಿ ಗೋವಾ ಸರ್ಕಾರದ ನಿರ್ಧಾರದಿಂದಾಗಿ ಇತ್ತೀಚೆಗಷ್ಟೇ ಬೀದಿಗೆ ಬಿದ್ದಿತ್ತು. ಬೈನಾ ಬೀಚ್‍ನಲ್ಲಿ ನೆಲೆಸಿದ್ದ ಬಡ ಕನ್ನಡಿಗ ಕೂಲಿ ಕಾರ್ಮಿಕರ ಕುಟುಂಬವನ್ನು ಗೋವಾ ಸರ್ಕಾರ `ಆಪರೇಷನ್ ಬೈನಾ’ ನಡೆಸಿ ತೆರವುಗೊಳಿಸಿತ್ತು. ಈ ವೇಳೆ ನೂರಾರು ಕನ್ನಡಿಗ ಕುಟುಂಬಗಳು ಸುರಿಯುತ್ತಿರುವ ಮಳೆಯಲ್ಲೇ ಬೀದಿಗೆ ಬಿದ್ದಿದ್ದವು. ಅವರಲ್ಲಿ ಹನುಮವ್ವ ಕುಟುಂಬವೂ ಒಂದು. ಆಗ ಹನುಮವ್ವ ತುಂಬು ಗರ್ಭಿಣಿ.

ಈಕೆ ಹಾಗೂ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಗಂಡ ನಾಗಪ್ಪ ಶಾಶ್ವತ ಪುನರ್ವಸತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಕುಟುಂಬ ಸಮೇತ ಮಾಪ್ಸಾ ಬಸ್ ನಿಲ್ದಾಣದ ಪಕ್ಕದ ಬಯಲಲ್ಲೇ ಜೀವನ ಸಾಗಿಸುತ್ತಿದ್ದರು. ನ.25ರಂದು ಹನುಮವ್ವಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರಾತ್ರಿ ಬಯಲಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ಮತ್ತು ಸದಸ್ಯರು ನಾಗಪ್ಪ ಹರಿಜನ ದಂಪತಿ ಆರ್ಥಿಕ ಸಹಾಯ ನೀಡಿದ್ದಾರೆ.

Write A Comment