ಕರ್ನಾಟಕ

ಗೋಮಾತೆಗೆ ದ್ರೋಹ ಬಗೆಯುವವರ ವಿನಾಶವಾಗಬೇಕು: ರಾಜ್ಯಪಾಲ ವಾಲಾ

Pinterest LinkedIn Tumblr

vala__ಮಂಡ್ಯ ನ.24: ದೇಶದಲ್ಲಿ ತಮಗೆ ಕಿರುಕುಳವಾಗುತ್ತಿದೆ ಎಂದು ಭಾವಿಸುವ ಭಾರತೀಯ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಸ್ವತಂತ್ರರಿದ್ದಾರೆಂದು ಅಸ್ಸಾಂ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಕರ್ನಾಟಕದ ರಾಜ್ಯಪಾಲ ವಜುಭಾಯಿ ರೂಢಭಾಯ್ ವಾಲಾ, ಗೋಹತ್ಯೆ ಬಗ್ಗೆ ಮಾತನಾಡುವ ಮೂಲಕ ವಿವಾದದ ಕಿಡಿಗೆ ತುಪ್ಪಸುರಿದಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಸೋಮಸಾಯಿ ಸ್ಕಂದ ಆಶ್ರಮದಲ್ಲಿ ಮಂಗಳವಾರ ಕಾಮಾಕ್ಷಿ ದೇವಿಯ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ವಜುಭಾಯಿ, ಗೋಮಾತೆ, ಮಾತೃಭೂಮಿ ಹಾಗೂ ಹೆತ್ತತಾಯಿಗೆ ದ್ರೋಹ ಬಗೆಯುವವರನ್ನು ವಿನಾಶ ಮಾಡಬೇಕು ಎಂದು ಹೇಳಿದರು.

ದೇಶ ಮತ್ತು ವಿಶ್ವದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ, ಭ್ರಷ್ಟಾಚಾರದ ಬಗ್ಗೆ ತಮ್ಮ ಭಾಷಣದಲ್ಲಿ ಆತಂಕ ವ್ಯಕ್ತಪಡಿಸಿದ ಅವರು, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು.

Write A Comment