ಕರ್ನಾಟಕ

ಅಸಹಿಷ್ಣುತೆಗೆ ಕಾರಣ ಮೋದಿಯಲ್ಲ ಆರೆಸ್ಸೆಸ್: ದೇವೇಗೌಡ

Pinterest LinkedIn Tumblr

HDD_ಚಿಕ್ಕಮಗಳೂರು, ನ.21: ರಾಷ್ಟ್ರದಲ್ಲಿ ಅಸಹಿಷ್ಣುತೆ ಹೆಚ್ಚಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣರಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರ್ದೇಶನಗಳು ಮುಖ್ಯ ಕಾರಣವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದ ಅಡಿಪಾಯ ಸಹಿಷ್ಣುತೆ. ಆ ಬಗ್ಗೆ ಅನೇಕ ವ್ಯಾಖ್ಯಾನಗಳನ್ನು ನೀಡಬಹುದು. ಆದರೆ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಲು ಧರ್ಮದ ಬಗ್ಗೆ ಮಾತನಾಡುವ ಆರೆಸ್ಸೆಸ್ ಮುಖ್ಯ ಕಾರಣ.

ಈ ಹಿಂದೆ ವಾಜಪೇಯಿರವರ ಅಧಿಕಾರವನ್ನು ನಾನು ಕಂಡಿದ್ದೇನೆ. ಈಗಿನ ಪ್ರಧಾನಿ ನರೇಂದ್ರ ಮೋದಿಯ ಆಡಳಿತವನ್ನೂ ಗಮನಿಸುತ್ತಿದ್ದೇನೆ. ದೇಶದ ಅಭಿವೃದ್ಧಿ ಬಗ್ಗೆ ಆರೆಸ್ಸೆಸ್ ಪ್ರಗತಿ ಪರೀಶೀಲನೆ ಮಾಡುತ್ತಿದೆ.

ಮೀಸಲಾತಿಯ ಪರಿಷ್ಕರಣೆ ಬಗ್ಗೆ ಮಾತನಾಡುತ್ತಿದೆ. ಅಂತಹ ಕಾರ್ಯವೇ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಲು ಕಾರಣವಾಗಿದೆ ಎಂದರು. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ ಎಂಬ ಸುದ್ದಿಗಾರರೋರ್ವರ ಪ್ರಶ್ನೆಗೆ, ಹೊಸ ಗೃಹ ಸಚಿವರು ಅಧಿಕಾರ ವಹಿಸಿಕೊಂಡಿದ್ದಾರೆ. ಮೂರು ದಿನಗಳಲ್ಲಿ ಎಲ್ಲ ಸರಿಪಡಿಸಬೇಕೆನ್ನುವುದು ಸರಿಯಲ್ಲ ಎಂದರು. ಈ ಸಮಯದಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Write A Comment