ರಾಷ್ಟ್ರೀಯ

ಬೀಫ್ ವ್ಯಾಪಾರಿಗಳಲ್ಲಿ ಮುಸ್ಲಿಮೇತರರೇ ಅಧಿಕ: ಮಾಜಿ ಮುಖ್ಯ ನ್ಯಾಯಾಧೀಶ ರಾಜೀಂದರ್ ಸಾಚಾರ್

Pinterest LinkedIn Tumblr

Rajendraಆಗ್ರಾ, ನ.21: ಭಾರತದಲ್ಲಿ ಮುಸ್ಲಿಮರಿಗಿಂತಲೂ ಅಧಿಕ ಸಂಖ್ಯೆಯ ಹಿಂದೂಗಳು ಬೀಫ್ ವ್ಯಾಪಾರದಲ್ಲಿ ತೊಡಗಿದ್ದಾ ರೆಂದು ದಿಲ್ಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ಹಾಗೂ ಸಾಚಾರ್ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ಹೇಳಿದ್ದಾರೆ. ಮಥುರಾದ ಕಾಲೇಜೊಂದ ರಲ್ಲಿ ಶುಕ್ರವಾರ ನಡೆದ ಮೂಲಭೂತವಾದ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಇತ್ತೀಚೆಗೆ ಭುಗಿಲೆದ್ದಿರುವ ಬೀಫ್ ವಿವಾದವನ್ನು ಪ್ರಸ್ತಾಪಿ ಸುತ್ತಾ ಈ ವಿಷಯವನ್ನು ಬಹಿರಂಗಪಡಿಸಿದರು.

ಜಾಗತಿಕ ಭದ್ರತೆ ಹಾಗೂ ಧಾರ್ಮಿಕ ಮೂಲಭೂತವಾದದ ಕುರಿತ ಚರ್ಚೆಗಾಗಿ ಮಥುರಾದ ಆರ್.ಸಿ.ಕಾಲೇಜ್‌ನಲ್ಲಿ ನಡೆದ ಈ ಸಮಾವೇಶದಲ್ಲಿ ಭಾರತ, ಕೆನಡ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಮತ್ತಿತರ ದೇಶಗಳ ವಿದ್ವಾಂಸರು ಹಾಗೂ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಮಾವೇಶದ ಕೊನೆಯ ದಿನವಾದ ಶುಕ್ರವಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಭಾರತದ ಶೇ.95ರಷ್ಟು ಬೀಫ್ ವ್ಯಾಪಾರಿಗಳು ಹಿಂದೂ ಸಮುದಾಯಕ್ಕೆ ಸೇರಿದವರೆಂದು ಹೇಳಿದರು.

‘‘ಹೆಚ್ಚುಕಮ್ಮಿ ಶೇ.95ರಷ್ಟು ಬೀಫ್ ವರ್ತಕರು ಹಿಂದೂಗಳು. ಆದಾಗ್ಯೂ, ಬೀಫ್ ತಿಂದನೆಂಬ ಕಾರಣಕ್ಕಾಗಿ ದಾದ್ರಿಯಲ್ಲಿ ಓರ್ವ ವ್ಯಕ್ತಿಯನ್ನು ಥಳಿಸಿ ಕೊಲ್ಲಲಾಯಿತು. ಈ ಸಾವು, ಮಾನವಕುಲದ ಹಾಗೂ ಮಾನವೀಯತೆಯ ಸಾವಾಗಿದೆ. ಧರ್ಮಕ್ಕೂ ಆಹಾರ ಶೈಲಿಗೂ ಯಾವುದೇ ಸಂಬಂಧವಿಲ್ಲ . ನಾನು ಕೂಡಾ ಬೀಫ್ ತಿನ್ನಬಹುದಾಗಿದೆ’’ ಎಂದರು.

Write A Comment