ಅಂತರಾಷ್ಟ್ರೀಯ

ಮೋದಿ-ಅಬೆ ಮಾತುಕತೆ ವೇಳೆ ತಲೆಕೆಳಗಾಗಿ ಹಾರಿದ ತ್ರಿವರ್ಣಧ್ವಜ

Pinterest LinkedIn Tumblr

Flag___ಕೌಲಾಲಂಪುರ,ನ.21: ಇಲ್ಲಿ ನಡೆಯುತ್ತಿರುವ 13ನೆ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ದ್ವಿಪಕ್ಷೀಯ ಮಾತುಕತೆಗಳಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಛಾಯಾಚಿತ್ರಕ್ಕೆ ಭಂಗಿ ನೀಡುತ್ತಿದ್ದ ವೇಳೆ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಾಡುತ್ತಿದ್ದು, ಇದು ಭಾರತವನ್ನು ಮುಜುಗರಕ್ಕೆ ತಳ್ಳಿತ್ತು.

ಮೋದಿ ಮತ್ತು ಅಬೆ ಅವರ ಸಾಂಪ್ರದಾಯಿಕ ಹಸ್ತಲಾಘವದ ವೇಳೆ ರಾಷ್ಟ್ರೀಯ ಧ್ವಜವು ಪ್ರಧಾನಿಯವರ ಹಿಂದೆ ಜಪಾನ್ ಧ್ವಜದ ಪಕ್ಕದಲ್ಲಿತ್ತು.

ಇದು ಗಡಿಬಿಡಿಯಲ್ಲಿ ಅನುದ್ದಿಷ್ಟವಾಗಿ ನಡೆದ ತಪ್ಪಾಗಿದೆ. ಇದೊಂದು ದುರದೃಷ್ಟಕರ ಘಟನೆ ಎಂದು ಅಧಿಕೃತ ಮೂಲಗಳು ಹೇಳಿದವು.

ಮೂರು ದಿನಗಳ ಮಲೇಷಿಯಾ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಮೋದಿ ಯವರು ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಗಳಲ್ಲಿ ಎರಡು ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸುವ ಜೊತೆಗೆ ರವಿವಾರ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Write A Comment