ಕರ್ನಾಟಕ

ಎಂಡೋ ಸಲ್ಫಾನ್ ಪೀಡಿತರ ಪುನರ್ವಸತಿಗೆ ಅನುದಾನ: ಸಚಿವ ಯು.ಟಿ.ಖಾದರ್

Pinterest LinkedIn Tumblr

Minister UT Khader with physically challenged children inaugurating the "Spandana 2015" program of physically challenged children at Shikshakara Sadan, in Bengaluru on Thursday 19th November 2015 Pics: www.pics4news.com

ಬೆಂಗಳೂರು, ನ.19: ಎಂಡೋ ಸಲ್ಫಾನ್ ಪೀಡಿತ ಮಕ್ಕಳಿಗೆ ಪುನರ್ ವಸತಿ ಕಲ್ಪಿಸಲು ಸಂಘ-ಸಂಸ್ಥೆಗಳು ಮುಂದೆ ಬಂದರೆ ಅಗತ್ಯ ಅನುದಾನ ನೀಡಲಾಗುವುದೆಂದು ಆರೋಗ್ಯ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.

ಗುರುವಾರ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ‘ಸ್ಪಂದನ-2015’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂಡೋ ಸಲ್ಫಾನ್ ಪೀಡಿತ ಮಕ್ಕಳ ಬದುಕು ತೀರ ದುಸ್ತರವಾಗಿದೆ. ಅಂತಹ ಮಕ್ಕಳ ನೆರವಿಗೆ ಸಂಘ ಸಂಸ್ಥೆಗಳು ಮುಂದೆ ಬರಬೇಕೆಂದು ತಿಳಿಸಿದರು.ಎಂಡೋ ಸಲ್ಫಾನ್ ಪೀಡಿತ ಮಕ್ಕಳ ಶಿಕ್ಷಣ ಹಾಗೂ ಪುನರ್ವಸತಿ ಕಲ್ಪಿಸಲು ಆರೋಗ್ಯ ಇಲಾಖೆ ಸಿದ್ಧವಿದೆ. ಸಂಘ, ಸಂಸ್ಥೆಗಳು ಮುಂದೆ ಬಂದರೆ ಇಲಾಖೆ ವತಿಯಿಂದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಜೊತೆಗೆ ವೃತ್ತಿ ಕೌಶಲ್ಯ ತರಬೇತಿಗೂ ಅಗತ್ಯ ನೆರವು ಒದಗಿಸಲಾಗುವುದೆಂದು ಅವರು ತಿಳಿಸಿದರು.

ಬುದ್ಧಿಮಾಂದ್ಯ ವಿಶೇಷ ಮಕ್ಕಳನ್ನು ದೇಶದ ಸಂಪತ್ತಾಗಿ ಮಾಡುವುದು ಸಾಮಾಜದ ಜವಾಬ್ದಾರಿ. ಇಂತಹ ಮಕ್ಕಳ ಬೆಳವಣಿಗೆಯಲ್ಲಿ ವಿಶೇಷವಾಗಿ ತರಬೇತಿ ಪಡೆದಿರುವ ಶಿಕ್ಷಕರ ಕಾರ್ಯ ಶ್ಲಾಘನೀಯವಾದದ್ದು. ಆ ಶಿಕ್ಷಕರ ತಾಳ್ಮೆ, ಪ್ರೀತಿ ಹಾಗೂ ಮಾನವೀತೆಯ ಗುಣಗಳಿಂದಾಗಿ ಬುದ್ಧಿಮಾಂದ್ಯ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈಯುತ್ತಿದ್ದಾರೆಂದು ಸಚಿವ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಬುದ್ಧಿಮಾಂದ್ಯ ವಿಶೇಷ ಮಕ್ಕಳ ಪೋಷಣೆ ಸುಲಭದ ಕೆಲಸವಲ್ಲ. ಅಂತಹ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಪ್ರತಿಯೊಬ್ಬ ನಾಗರಿಕರು ನೆರವಾಗಬೇಕು. ಈಗಾಗಲೇ ರಾಜ್ಯ ಸರಕಾರ ಇಂತಹ ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.

ಬುದ್ಧಿಮಾಂದ್ಯ ಹೊಂದಿರುವ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಶಿಕ್ಷಕರು ವಿಶೇಷ ತರಬೇತಿಯನ್ನು ಹೊಂದಿರುತ್ತಾರೆ. ಈ ಶಿಕ್ಷಕರು ತಾ ಯಿಗುಣವನ್ನು ಹೊಂದಿದ್ದರೆ ಮಾತ್ರ ಬುದ್ಧಿಮಾಂದ್ಯ ಮಕ್ಕಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಾಧ್ಯ. ಅಂತಹ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಸರಕಾರದ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದೆಂದು ಸಚಿವೆ ಉಮಾಶ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷ ಆಗ್ನೇಸ್ ಕುಂದರ್, ಉಪಾಧ್ಯಕ್ಷ ಜಯವಿಠಲ್, ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ, ಸಹ ಕಾರ್ಯದರ್ಶಿ ಉಮೇಶ್ ಮತ್ತಿತರರಿದ್ದರು.

Write A Comment