ಕರ್ನಾಟಕ

ಎಜಿ ರವಿವರ್ಮ ಕುಮಾರ್ ರಾಜಿನಾಮೆ ಅಂಗೀಕರಿಸಿದ ಸಿಎಂ

Pinterest LinkedIn Tumblr

55ravi-14ಬೆಂಗಳೂರು: ಅಡ್ವೊಕೇಟ್ ಜನರಲ್(ಎಜಿ) ಪ್ರೊ. ರವಿವರ್ಮ ಕುಮಾರ್ ಅವರು ತಮ್ಮ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಗೀಕರಿಸಿದ್ದಾರೆ.

ಸರ್ಕಾರಿ ವಕೀಲರ ನೇಮಕಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿ ತಮ್ಮ ಸ್ಥಾನ ರವಿವರ್ಮ ಕುಮಾರ್ ಅವರು ರಾಜಿನಾಮೆ ನೀಡಿದ್ದರು. ಅವರ ರಾಜಿನಾಮೆಯನ್ನು ಅಂಗೀಕರಿಸಿರುವ ಸಿಎಂ, ಮಧುಸೂದನ್ ಆರ್ ನಾಯಕ್ ಅವರ ಹೆಸರನ್ನು ನೂತನ ಅಡ್ವೊಕೇಟ್ ಜನರಲ್ ಹುದ್ದೆ ಶಿಫಾರಸು ಮಾಡಿದ್ದಾರೆ.

ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆ ಕಲಬುರಗಿ ಎಎಜಿಯಾಗಿ ರಾಘವೇಂದ್ರ ನಾಡಗೌಡ ಹಾಗೂ ದೆಹಲಿ ಎಎಜಿಯಾಗಿ ದೇವದತ್ ಕಾಮತ್ ಎಂಬುವರನ್ನು ನೇಮಕ ಮಾಡಿತ್ತು. ಇತ್ತೀಚೆಗಷ್ಟೆ ಈ ಇಬ್ಬರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಬೇಸರಗೊಂಡ ಪ್ರೊ. ರವಿವರ್ಮ ಕುಮಾರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

Write A Comment