ರಾಷ್ಟ್ರೀಯ

ನೆಹರೂ ಉದ್ದೇಶವನ್ನೂ ಯಾರೂ ಅನುಮಾನಿಸಲಾರರು: ರಾಜನಾಥ್ ಸಿಂಗ್

Pinterest LinkedIn Tumblr

77raja-singhನವದೆಹಲಿ:  ತತ್ವ ಸಿದ್ಧಾಂತಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ, ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಉದ್ದೇಶವನ್ನು ಯಾರೂ ಸಹ ಅನುಮಾನಿಸಲಾರರು ಎಂದೂ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಂಡಿತ್ ನೆಹರೂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್ ನೆಹರೂ ಅವರ ನೀತಿಗಳ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ, ದೇಶದ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಅವರು ರೂಪಿಸಿದ್ದ ಯೋಜನೆಗಳ ಬಗ್ಗೆ ಅನುಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು ನೆಹರೂ ಅವರು ಪ್ರಧಾನಿಯಾಗಿದ್ದಾಗ ಕೈಗೊಂಡ ಹಲವು ಜನಪ್ರಿಯ ಯೋಜನೆಗಳ ಬಗ್ಗೆ ರಾಜನಾಥ್ ಸಿಂಗ್ ಪ್ರಶಂಸೆ ವ್ಯಕ್ತ ಪಡಿಸಿದ್ದರು. ಮಕ್ಕಳು ಸರಿಯಾದ ಶಿಕ್ಷಣ ಪಡೆದರೇ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನೆಹರೂ ನಂಬಿದ್ದರು ಎಂದು ಸಿಂಗ್ ಹೇಳಿದ್ದಾರೆ.

Write A Comment