ಕರ್ನಾಟಕ

ಮಕ್ಕಳಿಗೆ ಬಾಲಭವನದಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ

Pinterest LinkedIn Tumblr

66bhaal-bhavanಬೆಂಗಳೂರು: ಪ್ರತಿಭೆ ಮತ್ತು ಜ್ಞಾನ ಕೇವಲ ಶ್ರೀಮಂತ ಮಕ್ಕಳಲ್ಲಷ್ಟೇ ಇರುವುದಿಲ್ಲ. ಕೂಲಿ ಕಾರ್ಮಿಕನ ಮಗನೂ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಸ್ವೀಕರಿಸುತ್ತಾನೆ ಎಂದು ರಾಜ್ಯಪಾಲ ವಜುಬಾಯ್ ವಾಲಾ ಹೇಳಿದ್ದಾರೆ.

ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಕ್ಷರ ಜ್ಞಾನಕ್ಕಿಂತ ಸಂಸ್ಕಾರ ಮುಖ್ಯ ಎಂದು ಅವರು, ಅಮೆರಿಕದಲ್ಲಿ ಜ್ಞಾನ ಇದೆ, ಆದರೆ ಸಂಸ್ಕಾರವಿಲ್ಲ. ಆದರೆ ಭಾರತದಲ್ಲಿ ಸಂಸ್ಕಾರಕ್ಕೆ ಕೊರತೆಯಿಲ್ಲ ಎಂದು ಹೇಳಿದರು. ಮಕ್ಕಳಿಗೆ ಸಂಸ್ಕಾರ ಬಹಳ ಮುಖ್ಯ ಎಂದು ರಾಜ್ಯಪಾಲರು ಅಭಿಪ್ರಾಯ ಪಟ್ಟರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಮಕ್ಕಳಿಗೆ ಶೌರ್ಯ ಪ್ರಶಸ್ತಿಯನ್ನು ಸಚಿವ ಕೆ.ಜೆ.ಜಾರ್ಜ್ ವಿತರಿಸಿದರು.ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ಸಿದ್ದೇಶ್ ಎಂ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಸಿಯಾ ಖೊಡೆ ಪಡೆದುಕೊಂಡರು. ಜತೆ ಜೊತೆಗೆ ನಾಲ್ಕು ಸಂಘ-ಸಂಸ್ಥೆಗಳು ನಾಲ್ಕು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡವು. ಇದಲ್ಲದೇ ಅಸಾಧಾರಣ ಪ್ರತಿಭಾ ಪ್ರದರ್ಶನ ನೀಡಿದ್ದಕ್ಕಾಗಿ 26 ಮಕ್ಕಳಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Write A Comment