ಕರ್ನಾಟಕ

ಗಂಡನ ಬಳಿಯಿದ್ದ 1.30 ಕೋಟಿ ರೂ. ಹಣವನ್ನು ಮಾಜಿ ಪ್ರಿಯಕರನ ಜೊತೆ ಸೇರಿ ಲೂಟಿ ಮಾಡಿಸಿದ ಪತ್ನಿ ! ಮುಂದೇನಾಯಿತು ನೀವೇ ಓದಿ..

Pinterest LinkedIn Tumblr

shruti-kumar

ಬೆಂಗಳೂರು: ಮನೆಯೊಡತಿಯೇ ಮಾಜಿ ಪ್ರಿಯಕರನ ಜೊತೆ ಸೇರಿ ಗಂಡನ ಬಳಿ ಇದ್ದ ಅಪಾರ ಪ್ರಮಾಣದ ಹಣವನ್ನು ತಾನೇ ಕಳವು ಮಾಡಿಸಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.

ಪತಿಯ ಸುಮಾರು 1.30 ಕೋಟಿ ರುಪಾಯಿ ಕಳವು ಮಾಡಿಸಿದ ಆರೋಪದ ಮೇಲೆ ಮನೆಯೊಡತಿ ಶ್ರುತಿ ಹಾಗೂ ಆಕೆಯ ಪ್ರಿಯಕರ ಕುಮಾರ್ ನನ್ನು ಬುಧವಾರ ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ತಿಂಗಳು 31ರಂದು ಜೆಪಿ ನಗರದ ನಿವಾಸಿ ರಾಮಚಂದ್ರ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುಮಾರು 1.30 ಕೋಟಿ ರುಪಾಯಿ ನಗದು ಕಳವು ಆಗಿತ್ತು. ಈ ಬಗ್ಗೆ ರಾಮಚಂದ್ರ ಅವರು ಜೆಪಿ ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ರಾಮಚಂದ್ರ ಅವರ ಪತ್ನಿ ಶೃತಿ ಬಗ್ಗೆ ಅನುಮಾನ ವ್ಯಕ್ತಪಡಿಸಿ, ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆ ವೇಳೆ ಟಿ ದಾಸರಹಳ್ಳಿ ನಿವಾಸಿ ಕುಮಾರ್ ಗೆ ತನ್ನ ಮನೆಯಲ್ಲಿ ಹಣ ಇರುವ ಬಗ್ಗೆ ಮಾಹಿತಿ ನೀಡಿದ್ದ ಶ್ರುತಿ, ಪೂರ್ವ ಯೋಜನೆಯಂತೆ ಗಂಡನನ್ನು ಧರ್ಮಸ್ಥಳಕ್ಕೆ ಕರೆದೊಯ್ದಿದ್ದಳು. ನವೆಂಬರ್ 1 ರಂದು ಮನೆಗೆ ಬಂದಾಗ ಕಳವಾದ ಘಟನೆ ಬೆಳಕಿಗೆ ಬಂದಿತ್ತು. ನಂತರ ರಾಮಚಂದ್ರ ಅವರು ಜೆಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗಂಡನ ಬಳಿಯಿದ್ದ ಕೋಟ್ಯಂತ ರೂಪಾಯಿ ಹಣವನ್ನು ಲಪಟಾಯಿಸಬೇಕೆಂದು ಸಂಚು ಹೆಣೆದಿದ್ದ ಪತ್ನಿ ಶ್ರುತಿ, ತನ್ನ ಸ್ನೇಹಿತ ಕುಮಾರ್ ಜೊತೆ ಸೇರಿ ಯೋಜನೆ ರೂಪಿಸಿದ್ದಳು. ಅದರಂತೆ ತನ್ನ ಮನೆಯ ನಕಲಿ ಕೀಯನ್ನು ಕುಮಾರ್ ಗೆ ಮಾಡಿಸಿಕೊಟ್ಟಿದ್ದಳು. ಸಂಚಿನಂತೆ, ಕುಮಾರ್ ಅಕ್ಟೋಬರ್.31ರಂದು ರಾತ್ರಿ, ರಾಮಚಂದ್ರ ಮನೆ ಪ್ರವೇಶಿಸಿ, 1 ಕೋಟಿ 30 ಲಕ್ಷ ರೂಪಾಯಿ ನಗದನ್ನು ಎಗರಿಸಿಕೊಂಡು ಹೋಗಿದ್ದ.

Write A Comment