ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಸಿ. ಹಣವಿಲ್ಲದೇ ಚುನಾವಣೆ ನಡೆಯುವುದು ಕಷ್ಟ. ಹಾಗಾಗಿ ಹಣದ ಬಗ್ಗೆ ಚಿಂತೆ ಬೇಡ. ನಾನು ಮೂಟೆಗಟ್ಟಲೇ ಹಣವಿಟ್ಟಿದ್ದೇನೆ….ಇದು ನಾಗಮಂಗಲದಲ್ಲಿ ಮಾಜಿ ಕಾಂಗ್ರೆಸ್ ಶಾಸಕ ಎಲ್.ಆರ್.ಶಿವರಾಮೇಗೌಡ ನೀಡಿದ ವಿವಾದಾತ್ಮಕ ಹೇಳಿಕೆ.
ನಾಗಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಮೇಗೌಡರು, ಪಕ್ಷದ ನಾಯಕರು ನನ್ನ ಸಂಸದ ಮಾಡ್ತೀನಿ, ಮಾಡ್ತೀನಿ ಅಂತ ತುಪ್ಪ, ಲಿಫ್ ಸ್ಟಿಕ್ ಸವರಿದ್ರು. ಹಾಗಾಗಿ ಪಕ್ಷದ ನಾಯಕರ ಮಾತು ನಂಬಿ 7 ವರ್ಷ ಕಳೆದುಕೊಂಡೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.
ಮುಂದಿನ ದಿನಗಳಲ್ಲಿ ನಾನು ಮತ್ತೆ ಕ್ಷೇತ್ರಕ್ಕೆ ಮರಳಲಿದ್ದೇನೆ. ಕ್ಷೇತ್ರದಲ್ಲಿ ನಾಟಕ ಆಡಿಸ್ತೇನೆ, ರಾಜ್ಯೋತ್ಸವ ಸಮಾರಂಭ ನಡೆಸುತ್ತೇನೆ. ನಾನು ಮೂಟೆಗಟ್ಟಲೇ ಹಣವಿಟ್ಟಿದ್ದೇನೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನನ್ನ ಗೆಲ್ಲಿಸಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ. ಸಮಾರಂಭದಲ್ಲಿ ವಸತಿ ಸಚಿವ ಅಂಬರೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
-ಉದಯವಾಣಿ