ಕರ್ನಾಟಕ

ಹಳಿ ತಪ್ಪಿದ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲು, ಸಾವು ನೋವು ಸಂಭವಿಸಿಲ್ಲ

Pinterest LinkedIn Tumblr

trainಬೆಂಗಳೂರು: ಸುಮಾರು 3000 ಸಾವಿರ ಮಂದಿಯನ್ನು ಹೊತ್ತ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲು ಇಂದು ಬೆಳಗ್ಗೆ ನಾಯಂಡಹಳ್ಳಿ ರೈಲ್ವೆ ನಿಲ್ದಾಣ ಬಳಿಯ ಬಾಪುಜಿನಗರ ಬಳಿ ಹಳಿ ತಪ್ಪಿದ್ದು ಬಾರಿ ದುರಂತ ತಪ್ಪಿದೆ.

ಬೆಂಗಳೂರು ಮೈಸೂರು ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರವಾಲ್ ಹೇಳಿದ್ದಾರೆ.

ತಿರುವಿನಲ್ಲಿ ಹಳಿಗಳ ಮೇಲೆ ಕಲ್ಲುಗಳನ್ನು ಇರಿಸಿದ್ದರಿಂದ ಈ ಅವಘಡ ಸಂಭವಿಸಿದ್ದು, ಯಾರೊ ದುಷ್ಕರ್ಮಿಗಳ ಕೈವಾಡವಿದೆ ಎಂದು ಅಗರವಾಲ್ ಹೇಳಿದ್ದಾರೆ.

ರೈಲು ಹಳಿ ತಪ್ಪಿದ ನಂತರ ಕೂಡಲೇ ದುರಸ್ಥಿಕಾರ್ಯ ನಡೆಸಿ ಒಂದು ನಂತರ ರೈಲು ಯತಾಸ್ಥಿತಿ ಮುಂದುವರೆಯಿತು ಎಂದು ಹೇಳಿದ್ದಾರೆ.

Write A Comment