ಕರ್ನಾಟಕ

ರಾಮೇಶ್ವರದಲ್ಲಿ ಆದಿಚುಂಚನಗಿರಿ ಶಾಖಾ ಮಠ ಉದ್ಘಾಟನೆ

Pinterest LinkedIn Tumblr

adiಮಂಡ್ಯ/ನಾಗಮಂಗಲ, ಅ.22- ಶ್ರೀ ಆದಿಚುಂಚನಗಿರಿ ಪುರಾಣ ಇತಿಹಾಸ ಪ್ರಸಿದ್ಧ ಪುಣ್ಯಸ್ಥಳ ಹಾಗೂ ದಿವ್ಯ ಧರ್ಮಪೀಠ ಶ್ರೀ ಮಠದ 71ನೆ ಪೀಠಾಧ್ಯಕ್ಷರಾಗಿದ್ದ  ಜಗದ್ಗುರು ಶ್ರೀ ಪದ್ಮ ಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ  ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮುಂತಾದ ಹತ್ತು- ಹಲವು ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಶಿಕ್ಷಣ ಮಾತ್ರದಿಂದಲೇ ಸಾಧ್ಯವೆಂಬುದನ್ನು ಮನ ಗಂಡಿದ್ದ ಮಹಾಸ್ವಾಮೀಜಿಯವರು ಗ್ರಾಮೀಣ ಪ್ರದೇಶಗಳಲ್ಲಿ ಶಿಶು ವಿಹಾರಗಳಿಂದ ಪ್ರಾರಂಭಿಸಿ ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳವರೆಗೆ ಸುಮಾರು 475ಕ್ಕೂ ಹೆಚ್ಚು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಪ್ರತಿವರ್ಷ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಸತಿ ಸೌಲಭ್ಯಗಳನ್ನು ಪಡೆದು ವಿದ್ಯಾವಂತರಾಗು ತ್ತಿದ್ದಾರೆ. ಶ್ರೀ ಗುರೂಜಿಯವರ ಕರಕಮಲ ಸಂಜಾತರಾದ ಶ್ರೀಮಠದ 72ನೆ ಪೀಠಾಧಿಪತಿ  ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂಕಲ್ಪಿಸಿದ್ದ ಎಲ್ಲ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.

ತಮಿಳುನಾಡು ರಾಮೇಶ್ವರಂನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು  ಅ.24ರಿಂದ 26ರ ವರೆಗೆ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ. ಅ.24ರಂದು ಸಂಜೆ 6 ಗಂಟೆಯಿಂದ 25ರ ಬೆಳಗ್ಗೆ 9 ಗಂಟೆಯವರೆಗೆ ಹೋಮ, ಹವನ, ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದೇ ದಿನ ಬೆಳಗ್ಗೆ 10 ಗಂಟೆಗೆ ಶ್ರೀ ಭೈರವಜ್ಯೋತಿ ಪುರ ಪ್ರವೇಶ ಮೆರವಣಿಗೆ, ಮಧ್ಯಾಹ್ನ 3 ಗಂಟೆಗೆ ಶ್ರೀ ಅರಳುಮಿಗು ರಾಮನಾಥಸ್ವಾಮಿಗೆ ಸಹಸ್ರ ಕಲಶಾಭಿಷೇಕ, ಸಂಜೆ 6 ಗಂಟೆಗೆ ರಾಮೇಶ್ವರಂ ಸಮುದ್ರತೀರ (ಅಗ್ನಿತೀರ್ಥ)ದಲ್ಲಿ ವಾರಣಾಸಿಯ ಶ್ರೀ ಗಂಗಾರತಿ ಸೇವಾಸಮಿತಿಯವರಿಂದ ಆರತಿ ಪೂಜೆ ನಡೆಯಲಿದೆ. ರಾತ್ರಿ 7 ಗಂಟೆಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ.

ಅ.26ರಂದು ಸೋಮವಾರ ಬೆಳಗ್ಗೆ 10.30 ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶಾಖಾಮಠದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲದ ಉದ್ಘಾಟನೆಯನ್ನು ಬೆಂಗಳೂರಿನ ಕೈಲಾಸ ಆಶ್ರಮದ ಪೀಠಾಧಿಪತಿ ಜಗದ್ಗುರು ಶ್ರೀ ಜಯೇಂದ್ರಪುರಿ ಮಹಾಸ್ವಾಮಿ ನೆರವೇರಿಸಲಿದ್ದಾರೆ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಯವರ ಪುತ್ಥಳಿ ಅನಾವರಣವನ್ನು ಬೆಳಗಾವಿಯ ನಾಗನೂರು ಮಠದ ಪೂಜ್ಯ ಜಗದ್ಗುರು ಶ್ರೀ ಸಿದ್ಧರಾಮ ಮಹಾಸ್ವಾಮಿಗಳವರು ನೆರವೇರಿಸಲಿದ್ದಾರೆ.

ನೂತನ ಶಾಖಾಮಠದ ಉದ್ಘಾಟನೆಯನ್ನು ತಮಿಳುನಾಡಿನ ರಾಜ್ಯಪಾಲ ಡಾ.ಕೆ.ರೋಸಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಸಚಿವರಾದ ಡಿ.ಕೆ.ಶಿವ ಕುಮಾರ್, ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಉಪಮುಖ್ಯಮಂತ್ರಿಆರ್.ಅಶೋಕ್ ಮತ್ತು ತಮಿಳುನಾಡಿನ ಸಾಧು-ಸಂತರು, ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ.

Write A Comment