ಕರ್ನಾಟಕ

ಕೊನೆಗೂ ತನ್ನ ಹೇಳಿಕೆಗೆ ಕ್ಷಮೆ ಯಾಚಿಸಿದ ಕೆ.ಎಸ್ ಈಶ್ವರಪ್ಪ

Pinterest LinkedIn Tumblr

ESHWARPPA

ಶಿವಮೊಗ್ಗ: ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆಗೆ ವಿವಾದಾತ್ಮಕ ಉತ್ತರ ನೀಡಿ ತೀವ್ರ ಟೀಕೆಗೊಳಗಾಗಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಕ್ಷಮೆ ಯಾಚಿಸಿದ್ದಾರೆ.

‘ನನ್ನ ಹೇಳಿಕೆಯಿಂದ ವರದಿಗಾರ್ತಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಆಕೆ ನನ್ನ ತಂಗಿ ಇದ್ದ ಹಾಗೆ. ನನ್ನ ಹೇಳಿಕೆಗೆ ವಿಷಾದ ವ್ಯಕ್ತ ಪಡಿಸಿ ,ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಶ್ನಿಸಿದ ಖಾಸಗಿ ಸುದ್ದಿವಾಹಿನಿಯ ವರದಿಗಾರ್ತಿಗೆ “ನಿನ್ನನ್ನು ಯಾರೋ ಎಳೆದುಕೊಂಡು ಹೋಗಿ ರೇಪ್‌ ಮಾಡಿದರೆ ನಾವು ಪ್ರತಿಪಕ್ಷದವರು ಎಲ್ಲೋ ಇರುತ್ತೇವೆ. ಏನು ಮಾಡೋಕಾಗುತ್ತೆ’ ಎಂದು ಈಶ್ವರಪ್ಪ ಅಸಭ್ಯವಾಗಿ ಉತ್ತರ ಕೊಟ್ಟಿದ್ದರು. ನಂತರ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬ ಸಮರ್ಥನೆ ನೀಡಿದ್ದರು.

ಆದರೆ ಈಶ್ವರಪ್ಪ ಹೇಳಿಕೆ ಬೆನ್ನಲ್ಲೇ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಶ್ವರಪ್ಪ ಕ್ಷಮೆ ಯಾಚಿಸಿದ್ದಾರೆ.

Write A Comment