ನವದೆಹಲಿ : ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಯೋಗಗುರು ಬಾಬಾ ರಾಮ್ ದೇವ್ ಸಲಹೆ ನೀಡಿದ್ದಾರೆ.
‘ಗೋವನ್ನು ಕೊಲ್ಲುವುದು ಮತ್ತು ಗೋವಿಗಾಗಿ ಜನರನ್ನು ಕೊಲ್ಲುವುದು ಕೂಡ ಅಪರಾಧ. ಎರಡೂ ಬಗೆಯ ಹಿಂಸೆ ದೇಶದಲ್ಲಿ ಕೊನೆಯಾಗಬೇಕು’ ಎಂದು ರಾಮ್ ದೇವ್ ಹೇಳಿದ್ದಾರೆ.
‘ಉತ್ತರ ಪ್ರದೇಶದಂತಹ ಅಂತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಗೋಹತ್ಯೆ ನಿಷೇಧವಾಗಬೇಕು .ಪ್ರಧಾನಿ ನರೇಂದ್ರ ಮೋದಿ ಅವರು ಗೋಹತ್ಯೆ ನಿಷೇಧ ಮಾಡುವಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು. ‘ಗೋಹತ್ಯೆ ನಿಷೇಧವಾಗದದ್ದೇ ಆದಲ್ಲಿ ಗೋವುಗಳ ಹತ್ಯೆ ಯೂ ನಿಲ್ಲುತ್ತದೆ. ಹಿಂದೂ ಮತ್ತು ಮುಸ್ಲಿಮರ ನಡುವಿನ ರಕ್ತಪಾತವೂ ನಿಲ್ಲುತ್ತದೆ ಎಂ9ದು ಅಭಿಪ್ರಾಯ ಪಟ್ಟರು.
