ಚಿಂತಾಮಣಿ, ಅ.11- ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಟೆಂಪೋ ಚಾಲಕ ಬಸ್‌ಗೆ ಡಿಕ್ಕಿ ಹೊಡೆಯುತ್ತಿದ್ದು, ಇದನ್ನು ತಪ್ಪಿಸಲು ಹೋದ ಬಸ್ ಚಾಲಕ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬಸ್‌ನಲ್ಲಿದ್ದ 40 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇವರಲ್ಲಿ ಐದು ಮಂದಿಗ ಗಂಭೀರಗೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಫರಿದಾ (50) ಎಂಬುವರಿಗೆ ತೀವ್ರ ತರ ಗಾಯಗಳಾಗಿದ್ದು, ಇವರನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಸೇರಿಸಲಾಗಿದೆ.
ವಿದ್ಯಾರ್ಥಿಗಳಾದ ಕೆಂಚಾರ್ಲ(ಹಳ್ಳಿಯ ಭವ್ಯಾ ಮತ್ತು ಸುಧಾ, ಉಪ್ಪುಕುಂಟೆಯ ಸಂಧ್ಯಾ ಮತ್ತು ಚಾಕವೇಲು ಗ್ರಾಮದ ಸೋಮ ಎಂಬುವರನ್ನು ಕೋಲಾರ ಮತ್ತು ಬೆಂಗಳೂರು ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಸುದ್ದಿ ತಿಳಿದ ತಕ್ಷಣ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರದಿಂದ ಚೇಳೂರು ಪಾತಪಾಳ್ಯ ಮಾರ್ಗವಾಗಿ ಬಾಗೇಪಲ್ಲಿಗೆ ಹೋಗುತ್ತಿದ್ದ ಖಾಸಗಿ ಬಸ್ ಚೇಳೂರು ರಸ್ತೆಯ ಚೊಕ್ಕರೆಡ್ಡಿಹಳ್ಳಿಯ ಸಮೀಪ ಹೋಗುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಸರಕು ಸಾಗಾಣೆಕೆ ಟೆಂಪೂ ಚಾಲಕ ಅತಿವೇಗದಿಂದ ಚಾಲನೆ ಮಾಡಿಕೊಂಡು ಬಸ್‌ಗೆ ಡಿಕ್ಕಿ ಹೊಡೆಯತ್ತಿದ್ದಾಗ ಅದನ್ನು ತಪ್ಪಿಸಲು ಬಸ್‌ನ ಚಾಲಕ ರಸ್ತೆಯ ಪಕ್ಕಕ್ಕೆ ತಿರುಗಿಸಿದ್ದರಿಂದ ಈ ಅವಘಡ ಸಂಭವಿಸಿದೆ.