ಕರ್ನಾಟಕ

ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಇಂದು ಕೋರ್ಟ್‌ಗೆ ರಾಘವೇಶ್ವರ ಶ್ರೀ ಹಾಜರ್

Pinterest LinkedIn Tumblr

ragaಬೆಂಗಳೂರು, ಅ.9-ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಒಂದನೇ ಎಸಿಎಂಎಂ ನ್ಯಾಯಾಲಯ ನಿನ್ನೆ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಇಂದು ನ್ಯಾಯಾಲಯದ ವಿಚಾರಣೆಗೆ ಹಾಜರಾದರು.

ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಜಾಮೀನು ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಒಂದನೆ ಎಸಿಎಂಎಂ ನ್ಯಾಯಾಲಯ ಕೋರ್ಟ್‌ಗೆ ಹಾಜರಾಗುವಂತೆ ನಿನ್ನೆ ಸಮನ್ಸ್ ನೀಡಿತ್ತು.

ಇಂದು ತಮ್ಮ ವಕೀಲರೊಂದಿಗೆ ಶ್ರೀಗಳು ನ್ಯಾಯಾಲಯಕ್ಕೆ ಹಾಜರಾದರು.  ಅದರನ್ವಯ ಇಂದು ಬೆಳಗ್ಗೆಯೇ ಅವರು ಕೋರ್ಟ್‌ಗೆ ಬರುತ್ತಾರೆಂದು ಹೇಳಲಾಗಿತ್ತಾದರೂ ಅವರು ಮಧ್ಯಾಹ್ನ 1.30ಕ್ಕೆ ಹಾಜರಾದರು.

Write A Comment