ನೆಲಮಂಗಲ, ಅ.9-ಅತ್ತೆ ಮನೆಯಲ್ಲಿ ಅಳಿಮಯ್ಯ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅರೆಬೊಮ್ಮನಹಳ್ಳಿ ಗ್ರಾಮದ ಅತ್ತೆ ಮನೆಯಲ್ಲೇ ವಾಸವಾಗಿದ್ದ ಅಳಿಮಯ್ಯ ಆನಂದ (30) ಸಾವನ್ನಪ್ಪಿರುವ ದುರ್ದೈವಿ. ಐದು ವರ್ಷಗಳ ಹಿಂದೆ ಅನಂದ ಅರೆಬೊಮ್ಮನಹಳ್ಳಿಯ ಯುವತಿಯನ್ನು ವಿವಾಹವಾಗಿದ್ದ. ಮದುವೆಯಾದ ದಿನದಿಂದ ಇದುವರೆಗೆ ಹೆಂಡತಿಯೊಂದಿಗೆ ಅತ್ತೆ ಮನೆಯಲ್ಲೇ ವಾಸವಾಗಿದ್ದ. ಕೆಲವು ತಿಂಗಳಿನಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಈತನ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಹೆಂಡತಿ, ಅತ್ತೆ, ಮಾವ ಪರಾರಿಯಾಗಿದ್ದಾರೆ. ಆನಂದನನ್ನು ಹತ್ಯೆ ಮಾಡಿ ನೇಣು ಬಿಗಿದಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಜಗದೀಶ್ ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.