ಕರ್ನಾಟಕ

ಬೆಟ್ಟಿಂಗ್ ದಂಧೆ: ನಿವೃತ್ತ ಪೊಲೀಸ್‌ ಆಯುಕ್ತರ ರವೀಂದ್ರ ಪ್ರಸಾದ್ ವಿಚಾರಣೆ

Pinterest LinkedIn Tumblr

Ravindraಬೆಂಗಳೂರು, ಅ.8: ಹುಬ್ಬಳ್ಳಿ- ಧಾರವಾಡ ಕ್ರಿಕೆಟ್ ಬೆಟ್ಟಿಂಗ್ ದಂಧೆ ಸಂಬಂಧ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳ ತಂಡ, ಅವಳಿ ನಗರದ ನಿವೃತ್ತ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ಅವರನ್ನು ಇಲ್ಲಿನ ಅರಮನೆ ರಸ್ತೆಯಲ್ಲಿನ ಸಿಐಡಿ ಕಚೇರಿಯಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ವಿಚಾರಣೆ ನಡೆಸಿದೆ.

ಗುರುವಾರ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೂ ವಿಚಾರಣೆ ನಡೆಸಿದ ಸಿಐಡಿ ಐಜಿ ಶರತ್ ಚಂದ್ರ ಹಾಗೂ ಎಸ್ಪಿ ಆರ್.ಕುಮಾರಸ್ವಾಮಿ ನೇತೃತ್ವದ ತಂಡ, ರವೀಂದ್ರ ಪ್ರಸಾದ್‌ಗೆ ಬೆಟ್ಟಿಂಗ್ ದಂಧೆಯಲ್ಲಿನ ಬುಕ್ಕಿಗಳೊಂದಿಗಿನ ಸಂಪರ್ಕಕ್ಕೆ ಸಂಬಂಧಪಟ್ಟಂತೆ 40ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದೆ.

ಆದರೆ, ಅವರ ಪ್ರಶ್ನೆಗಳಿಗೆ ರವೀಂದ್ರ ಪ್ರಸಾದ್ ನಕಾರಾತ್ಮಕ ಉತ್ತರಗಳನ್ನು ನೀಡಿದ್ದಾರೆಂದು ಸಿಐಡಿಯ ಉನ್ನತ ಮೂಲಗಳು ತಿಳಿಸಿವೆ.

Write A Comment