ಕರ್ನಾಟಕ

ಆಸ್ಪತ್ರೆಗೆ ದಾಖಲಾದ ಶಿವಣ್ಣನ ಆರೋಗ್ಯ ವಿಚಾರಿಸಲು ಲೀಲಾವತಿ, ವಿನೋದ್ ರಾಜ್, ರವಿಚಂದ್ರನ್, ಪುನೀತ್ , ಯಶ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ನಟರು ಆಸ್ಪತ್ರೆಗೆ ಭೇಟಿ

Pinterest LinkedIn Tumblr

lila

ಬೆಂಗಳೂರು: ಅಸ್ವಸ್ಥಗೊಂಡು ಮಲ್ಯ ಆಸ್ಪತ್ರೆಗೆ ದಾಖಲಾಗಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ನಟರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

ಹಿರಿಯ ನಟ ರವಿಚಂದ್ರನ್, ಪುನೀತ್ ರಾಜ್‌ಕುಮಾರ್, ಯಶ್, ಪ್ರೇಮ್, ಇಂದ್ರಜಿತ್ ಲಂಕೇಶ್, ಚಿರಂಜೀವಿ ಸರ್ಜಾ, ಸುಧಾರಾಣಿ, ತಾರಾ, ಪೂಜಾ ಗಾಂಧಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಶಿವಣ್ಣನ ಆರೋಗ್ಯ ವಿಚಾರಿಸಿದರು.

ravi

ಶಿವಣ್ಣ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮ್, ನಾನು ಈಗಷ್ಟೆ ಭೇಟಿ ಮಾಡಿ ಬಂದೆ, ಶಿವಣ್ಣ ಚೆನ್ನಾಗಿದ್ದಾರೆ. ರಕ್ತನಾಳದಲ್ಲಿ ಯಾವುದೇ ಬ್ಲಾಕ್ ಆಗಿಲ್ಲ. ದೇವರ ದಯೆಯಿಂದ ಅವರು ಚೆನ್ನಾಗಿದ್ದಾರೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುತ್ತಾರೆ. ಶಿವಣ್ಣನಿಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದರು.

indra

punth

tara

yash

ನಾನು ಶಿವಣ್ಣನನ್ನ ನೋಡೋಕೆ ಆಗ್ಲಿಲ್ಲ. ಗೀತಕ್ಕ ಜೊತೆ ಮಾತನಾಡಿಕೊಂಡು ಬಂದೆ. ನಾಳೆ ಬೆಳಗ್ಗೆ ಡಿಸ್ಚಾರ್ಜ್ ಮಾಡ್ತಾರಂತೆ. ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಚಿರಂಜೀವಿ ಸರ್ಜಾ ಹೇಳಿದರು.

Write A Comment