ಕನ್ನಡ ವಾರ್ತೆಗಳು

ಹಾಂಗ್‌ಕಾಂಗ್‌ನಲ್ಲಿ ಕುಣಿಯಲಿದೆ ಉಪ್ಪಿನಕುದ್ರು ಗೊಂಬೆಗಳು: ಅ.8ಕ್ಕೆ ತಂಡದ ಪಯಣ

Pinterest LinkedIn Tumblr

ಉಡುಪಿ: ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡ ತನ್ನದೇ ಆದ ಕಾಯಕದಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವುದಂತೂ ಸುಳ್ಳಲ್ಲಾ. ಇಲ್ಲಿಯ ಕಲಾ ಪರಂಪರೆ 350 ವರ್ಷಗಳ ಸುಧೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ಇಂದು 6 ನೇ ತಲಾಂತರದಲ್ಲಿ ನಿರಂತರವಾಗಿ ಪ್ರವಹಿಸುತ್ತಿರುವುದು ಒಂದು ಗಿನ್ನಿಸ್ ದಾಖಲೆವೆನ್ನಬಹುದು.

ಈ ಎಲ್ಲಾ ಸಾಧನೆ ಸಂವರ್ಧನೆಗೆ ಮೂಲ ಕಾರಣ ಉಪ್ಪಿನಕುದುರಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ. ಸರಕಾರದ ಯಾವುದೇ ಸಹಾಯಧನ ನಿರೀಕ್ಷಿಸದೆ, ಸಾಂಘಿಕ ಪ್ರಯತ್ನದಿಂದ ಅಳಿವಿನಂಚಿನಲ್ಲಿರುವ ವಿಶಿಷ್ಟ ಅಷ್ಟೇ ಅಪರೂಪದ ಗೊಂಬೆಯಾಟ ಕಲೆಯನ್ನು ಪ್ರಪಂಚದಾದ್ಯಂತ 15-20 ಕ್ಕೂ ಹೆಚ್ಚು ಬಾರಿ ನಾನಾ ರಾಷ್ಟ್ರಗಳಿಗೆ ಪರಿಚಯಿಸಿದ ಕೀರ್ತಿ ಈ ತಂಡದ್ದು.

OLYMPUS DIGITAL CAMERA

Puppet Troupe_Uppinakudru_Bhaskar kogga kamath (3) Puppet Troupe_Uppinakudru_Bhaskar kogga kamath (1)

ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ಇಂದು ತನ್ನ ಸಾಧನೆಯ ಇನ್ನೊಂದು ಮೈಲಿಗಲ್ಲಿಗಾಗಿ ಸಿದ್ಧವಾಗುತ್ತಿರುವುದೊಂದು ವಿಶೇಷ. ರಾಜ್ಯ ಪ್ರಶಸ್ತಿ ವಿಜೇತ ಭಾಸ್ಕರ್ ಕೊಗ್ಗ ಕಾಮತರ ನೇತೃತ್ವದಲ್ಲಿ ಅಕ್ಟೋಬರ್ 8 ರಂದು (ನಾಳೆ) ಹಾಂಗ್ ಕಾಂಗ್ ದೇಶದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದೆ. ಒಂದು ವಾರದ ಕಾಲ ಅಲ್ಲಿ ಪ್ರದರ್ಶನ ನೀಡಲಿರುವ ಈ ತಂಡವನ್ನು ಹಾಂಗ್ ಕಾಂಗ್ ಕನ್ನಡ ಸಂಘ ಆಮಂತ್ರಿಸಿ ಆದರಾತಿಥ್ಯ ನೀಡುತ್ತಿದೆ.

ಹಾಗೇ ನಾಡಿನ ಮುಂಚೂಣಿ ಐ.ಟಿ. ದಿಗ್ಗಜ ಇನ್ಫೋಸಿಸ್ ನ ಡಾ. ಸುಧಾಮೂರ್ತಿಯವರು ಈ ಪ್ರವಾಸದ ಸಹಪ್ರಾಯೋಜಕತ್ವ ವಹಿಸಿರುವುದೊಂದು ವಿಶೇಷ.

Write A Comment