ಬೆಂಗಳೂರು, ಅ.೫- ಎಲ್‌ಇಡಿ ಬಲ್ಬ್ ಕಡ್ಡಾಯಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕಡಿಮೆ ದರದಲ್ಲಿ ಬಲ್ಬ್ ಒದಗಿಸುವ ಸಂಬಂಧ ಉತ್ಪಾದಕರೊಂದಿಗೆ ಇಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು.
ಗೃಹ ಬಳಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಎಲ್‌ಇಡಿ ಬಲ್‌್ಿನ್ನು ಕಡ್ಡಾಯಮಾಡಲಾಗಿದ್ದು, ಕಡಿಮೆ ದರದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಒದಗಿಸುವ ಸಂಬಂಧ ೩೦ ಕಂಪನಿಗಳ ೭೦ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಅವರು ಟೆಂಡರ್ ಕರೆದಾಗ ಕಡಿಮೆ ವೆಚ್ಚವನ್ನು ಕೋಟ್ ಮಾಡುವಂತೆ ಮನವಿ ಮಾಡಿದರು.
ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತಿದ್ದು, ಎಲ್‌ಇಡಿ ಬಲ್ಬ್ ಗಳ ಬಳಕೆಯನ್ನು ಎಲ್ಲೆಡೆ ಮಾಡಲು ಅನುವಾಗುವಂತಹ ಸೂಕ್ತ ದರ ನಿಗದಿಗೊಳಿಸುವಂತೆ ಕೋರಿದರು.