ಕರ್ನಾಟಕ

23ರಂದೇ ದಸರಾ ಮೆರವಣಿಗೆ

Pinterest LinkedIn Tumblr

Jambuಮೈಸೂರು, ಅ.4: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ದಸರಾ ಜಂಬೂಸವಾರಿಯ ದಿನಾಂಕ ಕುರಿತು ಮತ್ತೆ ತನ್ನ ನಿಲುವು ಬದಲಾಯಿಸಿರುವ ಸರಕಾರ, ಪೂರ್ವನಿಗದಿಯಂತೆ ಅ.23ರಂದೇ ದಸರಾ ಮೆರವಣಿಗೆ ನಡೆಸಲು ತೀರ್ಮಾನಿಸಿದೆ.
ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಅರಮನೆಯ ಪುರೋ ಹಿತರು, ಅರ್ಚಕರು ಮತ್ತು ಪಂಚಾಂಗ ಪಂಡಿತ ರೊಂದಿಗೆ 2 ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸರಕಾರ ಎಂದಿನಂತೆ ಅ.23ರಂದೇ ವಿಜಯದಶಮಿ ಮೆರವಣಿಗೆ ನಡೆಸಲು ನಿರ್ಧರಿಸಿತು. ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿ ರುವ ಪ್ರಮೋದಾದೇವಿ ಒಡೆಯರ್, ಕಡೆಗೂ ಸರಕಾರ ಅಕ್ಟೋಬರ್ 23ರಂದೇ ವಿಜಯದಶಮಿ ಮೆರವಣಿಗೆ ಆಚರಿಸಲು ನಿರ್ಧರಿಸಿರುವುದು ನೈತಿಕತೆಯ ಗೆಲುವಾಗಿದೆ ಎಂದರು. ಅರಮನೆಯ ಗತವೈಭವ, ಪರಂಪರೆ ಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಧ್ವನಿಗೂಡಿ ಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಅಲ್ಲದೆ, ಅಕ್ಟೋಬರ್ 13ರಿಂದ 22ರವರೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚೊಚ್ಚಲ ಖಾಸಗಿ ದರ್ಬಾರ್ ನಡೆಸಲಿದ್ದಾರೆ ಎಂದು ಪ್ರಕಟಿಸಿದರು.

ಸರಕಾರ ಅ.23ರಂದು ವಿಜಯದಶಮಿ ಮೆರವಣಿಗೆಯನ್ನು ಆಯೋಜಿಸುವುದರಿಂದ ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಲು ಮಾತ್ರ ಅನುಕೂಲವಾಗುವುದಿಲ್ಲ. ಬದಲಿಗೆ ಜಂಬೂಸವಾರಿ ನೋಡಲು ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಪ್ರವಾಸಿಗರಿಗೂ ಗೊಂದಲ ತಪ್ಪಲಿದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಮಾತುಕಡೆ ನಡೆಸಿದರು. ಅ.22ರಂದು ಅರಮನೆಯಲ್ಲಿ ನಡೆಯುವ ವಿಧಿ ವಿಧಾನವನ್ನು ಮನವರಿಕೆ ಮಾಡಿಕೊಟ್ಟ ಪ್ರಮೋದಾದೇವಿ ಒಡೆಯರ್ ಅಂದು ಅಂಬಾರಿಗೂ ಪೂಜೆ ಸಲ್ಲಿಸಬೇಕಾಗಿರುವುದರಿಂದ ವಿಜಯದಶಮಿ ಮೆರವಣಿಗೆಗೆ ಚಿನ್ನದ ಅಂಬಾರಿ ನೀಡಲು ಕಷ್ಟ ಸಾಧ್ಯ ಎಂದು ತಿಳಿಸಿದರು. ನಂತರ ಎಂದಿನಂತೆ ಅಕ್ಟೋಬರ್ 23ಕ್ಕೆ ವಿಜಯದಶಮಿ ಮೆರವಣಿಗೆ ನಡೆಸಲು ಸರಕಾರ ನಿರ್ಧಾರಕೈಗೊಂಡಿತು.

ಯದುವೀರ್‌ಗೆ ಅಧಿಕೃತ ಆಹ್ವಾನ ಮೈಸೂರು: ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಅರಮನೆಯ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿವಾಸಕ್ಕೆ ತೆರಳಿ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮೋದಾದೇವಿ ಒಡೆಯರ್ ಅವರಿಗೆ ದಸರೆಗೆ ಸಹಕಾರ ನೀಡುವಂತೆ ಕೋರಿ ಅಧಿಕೃತ ಆಹ್ವಾನ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಸಾದ್, ಅರಮನೆಯ ಆಚರಣೆ, ಧಾರ್ಮಿಕ ಕಾರ್ಯಗಳಿಗೆ ಸರಕಾರ ಎಂದೂ ಅಡ್ಡಿಬರುವುದಿಲ್ಲ. ಅರಮನೆ ಮತ್ತು ಸರಕಾರದೊಂದಿಗೆ ಸೌಹಾರ್ದ ಸಂಬಂಧ ಇದ್ದು ದಸರೆಯನ್ನು ಜನರ ಭಾವನೆಗೆ ಅನುಗುಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಸಚಿವ ಎಚ್.ಎಸ್.ಮಹಾದೇವಪ್ರಸಾದ್, ಮೇಯರ್ ಆರ್.ಲಿಂಗಪ್ಪ, ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾಧಿಕಾರಿ ಸಿ.ಶಿಖಾ, ಸಿಇಓ ಎ.ಗೋಪಾಲ್, ಪ್ರಾದೇಶಿಕ ಆಯುಕ್ತ ಡಾ.ಎಂ.ಆರ್.ರವಿ, ನಗರಪಾಲಿಕೆ ಆಯುಕ್ತ ಡಾ.ಬೆಟ್ಸೂರ್ ಮಠ್ ಹಾಜರಿದ್ದರು

Write A Comment