ಕರ್ನಾಟಕ

ಹಿಂದಿ ಕಿರುತೆರೆಗೆ ಹಾರಿದ ಜೆಕೆ ಇನ್ನುಮುಂದೆ ‘ರಾವಣ’

Pinterest LinkedIn Tumblr

JK

ಬೆಂಗಳೂರು: ಚಂದ್ರಿಕ ಸಿನಿಮಾದಲ್ಲಿ ಚಿತ್ರಕಾರನಾಗಿ ಮನಸೆಳೆಯುವ ಅಭಿನಯ ನೀಡಿರುವ ಜೆಕೆ ಸದ್ಯ ಬ್ಯಾಕ್ ಟೂ ಬ್ಯಾಕ್ ಐದು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಜೆಕೆ ಖಡಕ್ ಅಭಿನಯಕ್ಕೆ, ಸಖತ್ ಫಿಟ್‍ನೆಸ್‍ಗೆ, ಹ್ಯಾಡ್ಸಂ ಲುಕ್‍ಗೆ ಮನಸೋಲದವರಿಲ್ಲ. ಇದೀಗ ಕಿರುತೆರೆ ಸೂಪರ್ ಸ್ಟಾರ್ ಜೆಕೆ ಹಿಂದಿ ಕಿರುತೆರೆಗೆ ಕಾಲಿಡುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಪರಂಪರೆ ಸಾರುವ ರಾಮಾಯಣ ಕಥೆ ಹಿಂದಿ ವಾಹಿನಿಯೊಂದರಲ್ಲಿ ‘ಸೀಯಾಕಾ ರಾಮ್’ ಹೆಸರಿನಲ್ಲಿ ಹೊಸ ಧಾರವಾಹಿಯಲ್ಲಿ ಆರಂಭಗೊಳ್ಳುತ್ತಿದ್ದು ಇದರಲ್ಲಿ ಜೆಕೆ ರಾವಣನಾಗಿ ಮಿಂಚಲಿದ್ದಾರೆ.

ಹೌದು. ಜೆಕೆಯನ್ನು ನೋಡಿದವರು ಸೀಯಾಕಾ ರಾಮ್ ನಿರ್ದೇಶಕರಿಗೆ ಜೆಕೆ ಬಗ್ಗೆ ತಿಳಿಸಿದ್ದರಂತೆ. ನಂತರ ಆಡಿಷನ್ ಸಮಯದಲ್ಲಿ ಜೆಕೆ ರಾವಣನಾಗಿ ಅಭಿನಯಿಸಿದ ವಿಡಿಯೋವನ್ನು ಚಿತ್ರ ತಂಡಕ್ಕೆ ಕಳಹಿಸಿದ್ದಾರೆ. ಈ ವಿಡಿಯೋದಲ್ಲಿ ಜೆಕೆ ಅಭಿನಯ ಚಿತ್ರತಂಡಕ್ಕೆ ಇಷ್ಟವಾಗಿ ಅಂತಿಮವಾಗಿ ಜೆಕೆ ಅವರನ್ನೇ ರಾವಣನ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ.

ಒಂದು ಕಡೆ ಧಾರವಾಹಿಯಲ್ಲಿ ಜೆಕೆ ಮಿಂಚುತ್ತಿದ್ದರೆ ಇನ್ನೊಂದು ಕಡೆ ಅವರ ಸಿನಿಮಾಗಳು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ.

ಕ್ರಿಕೆಟ್ ಬಗೆಗಿನ ಬೆಂಗಳೂರು-23, ಆಸ್ಕರ್ ಪ್ರಶಸ್ತಿಗೆ ಎಂಟ್ರಿಯಾಗಿರುವ ಕೇರ್ ಆಫ್ ಫುಟ್‍ಪಾತ್ ಪಾರ್ಟ್-2, ಕುಚ್ಚಿಕು ಕುಚ್ಚಿಕು ಮಾತ್ರವಲ್ಲದೇ ಮತ್ತೊಂದು ಥ್ರಿಲರ್ ಮೂವಿ ಕೂಡ ತೆರೆಗೆ ಬರುವುದಕ್ಕೆ ರೆಡಿಯಾಗಿದೆ. ಇಷ್ಟೆಲ್ಲ ಬ್ಯೂಸಿಯಾಗಿರುವ ಜೆಕೆ ಕಾಲಿವುಡ್‍ಗೂ ಸಹ ಎಂಟ್ರಿ ಪಡೆದಿದ್ದಾರೆ. ವೀರ ಧೀರ ಶೂರನ್ ಎನ್ನುವ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Write A Comment