ಕರ್ನಾಟಕ

ಅಸ್ಥಿ ವಿಸರ್ಜನೆ ಮಾಡಲು ಹೊರಟವರ ಕಾರಿಗೆ ಟಿಪ್ಪರ್ ಡಿಕ್ಕಿ: ಮೂವರ ದುರ್ಮರಣ

Pinterest LinkedIn Tumblr

accidentಚನ್ನಪಟ್ಟಣ, ಸೆ.25-ತಾಯಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಮಾಡಲೆಂದು ತಂದೆಯೊಂದಿಗೆ ಬರುತ್ತಿದ್ದ ಇಬ್ಬರು ಪುತ್ರರು ಹಾಗೂ ಅವರ ಚಿಕ್ಕಪ್ಪ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ  ಇಂದು ಮಧ್ಯಾಹ್ನ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ  ಚಿತ್ತೂರು ಜಿಲ್ಲೆಯ ಮೆದವಾಡಿ ಪಟ್ಟಣದ ಬಿಲ್ಲಿನಾಯ್ಡು  (38), ವರದರಾಜುನಾಯ್ಡು (34) ಹಾಗೂ ಇವರ ಚಿಕ್ಕಪ್ಪ ಗೋವಿಂದನಾಯ್ಡು (65) ಮೃತಪಟ್ಟ ದುರ್ದೈವಿಗಳು. ವೆಂಕಟಪತಿನಾಯ್ಡು ಅವರ ಪತ್ನಿ ಪಾಪಮ್ಮ ನಿಧನರಾಗಿದ್ದು, ತಿಥಿ ಕಾರ್ಯ  ಪೂರ್ಣಗೊಂಡ ನಂತರ ಅಸ್ಥಿ ವಿಸರ್ಜನೆ ಮಾಡಲು ಮಕ್ಕಳು ಹಾಗೂ ಸಹೋದರನೊಂದಿಗೆ ಬೆಂಗಳೂರಿಗೆ ಬಂದು, ಅಲ್ಲಿಂದ ಕಾರನ್ನು ಬಾಡಿಗೆಗೆ ಪಡೆದು ಶ್ರೀರಂಗಪಟ್ಟಣಕ್ಕೆ ಬರುತ್ತಿದ್ದರು.

ಚನ್ನಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮುದುಗೆರೆ ಬಳಿ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ವೆಂಕಟಪತಿನಾಯ್ಡು ಹಾಗೂ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ಸಹಿತ ಚಾಲಕನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Write A Comment